Advertisement

ನೀರವ್‌ನ “ರಿದಮ್‌ ಹೌಸ್‌’ಶೀಘ್ರ ಹರಾಜು

07:14 PM Dec 25, 2021 | Team Udayavani |

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಮೋಸ ಮಾಡಿ, ವಿದೇಶಕ್ಕೆ ಪರಾರಿಯಾಗಿರುವ ವಾಣಿಜ್ಯ ಉದ್ಯಮಿ ನೀರವ್‌ ಮೋದಿಗೆ ಸೇರಿರುವ 1000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಬ್ಯಾಂಕುಗಳಿಗೆ ಬಿಟ್ಟುಕೊಟ್ಟಿದೆ.

Advertisement

ದಕ್ಷಿಣ ಮುಂಬೈನಲ್ಲಿರುವ ಪ್ರಸಿದ್ಧ ರಿದಮ್‌ ಹೌಸ್‌ ಸೇರಿ ಅನೇಕ ಆಸ್ತಿಯನ್ನು ಬ್ಯಾಂಕುಗಳಿಗೆ ಕೊಡಲಾಗಿದ್ದು, ಅದರ ಹರಾಜು ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ. ಅಹ್ಮದಾಬಾದ್‌ನ ಸೌರ ವಿದ್ಯುತ್‌ ಘಟಕವನ್ನು ಬ್ಯಾಂಕ್‌ಗಳಿಗೆ ಇ.ಡಿ. ಹಸ್ತಾಂತರಿಸಿದೆ.

ಈ ಹಿಂದೆ ನೀರವ್‌ ಮನೆಯಲ್ಲಿದ್ದ ಚಿತ್ರ ಕಲಾಕೃತಿಗಳು, ಕಾರುಗಳ ಹರಾಜಿನಿಂದ ಸಿಕ್ಕಿದ್ದ 6 ಕೋಟಿ ರೂ. ಅನ್ನೂ ಬ್ಯಾಂಕಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next