Advertisement

ಮುಂಬಯಿ ಸ್ಕೈ ವಾಕ್‌ ಕುಸಿದು ಹಿರಿಯ ನಾಗರಿಕನಿಗೆ ಗಂಭೀರ ಗಾಯ

12:10 PM Feb 08, 2017 | udayavani editorial |

ಮುಂಬಯಿ : ಮುಂಬಯಿ ನಗರ ಹೊರವಲಯದ ದಹಿಸರ್‌ನಲ್ಲಿ  ಸ್ಕೈ ವಾಕ್‌ ಭಾಗವೊಂದು ಕುಸಿದ ಪರಿಣಾಮವಾಗಿ ಹಿರಿಯ ನಾಗರಿಕರೊಬ್ಬರು ಗಂಭೀರವಾಗಿ ಗಾಯಗೊಡರು.

Advertisement

ಪಶ್ಚಿಮ ದಹಿಸರ್‌ನಲ್ಲಿನ ಸ್ಕೈ ವಾಕ್‌ ಕುಸಿಯುತ್ತಿದ್ದಂತೆಯೇ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ 65ರ ಹರೆಯದ ಸುನೀಲ್‌ ಕುಲಕರ್ಣಿ ಎಂಬವರು ಬಿದ್ದು  ಗಂಭೀರವಾಗಿ ಗಾಯಗೊಂಡರು. ಸ್ಥಳದಲ್ಲಿದ್ದವರು ಒಡನೆಯೇ ಕುಲಕರ್ಣಿ ಅವರನ್ನು ಸಮೀಪದ ಸಿಲ್ವರ್‌ಲೈನ್‌ ಆಸ್ಪತ್ರೆಗೆ ದಾಖಲಿಸಿದರು ಎಂದು ಬಿಎಂಸಿ ವಿಪತ್ತು ನಿರ್ವಹಣೆಯ ಕಂಟ್ರೋಲ್‌ ರೂಮ್‌ ಅಧಿಕಾರಿಯೋರ್ವರು ತಿಳಿಸಿದ್ದಾರೆ.

850 ಮೀಟರ್‌ ಎತ್ತರದ ಸ್ಕೈ ವಾಕ್‌ ಅನ್ನು ಮುಂಬಯಿ ಮೆಟ್ರೋಪಾಲಿಟನ್‌ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) 2011ರಲ್ಲಿ ನಿರ್ಮಿಸಿತ್ತು. 

ಸ್ಕೈ ವಾಕ್‌ ನಿರ್ವಹಣೆಯಲ್ಲಿ ದೋಷಗಳಿದ್ದರೆ ನಾವು ಕೇಸು ದಾಖಲಿಸಿಕೊಳ್ಳುತ್ತೇವೆ; ಸದ್ಯ ಪ್ರಕರಣದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಸ್ಥಳೀಯ ಎಂಎಚ್‌ಬಿ ಪೊಲೀಸ್‌ ಠಾಣೆಯ ಅಧಿಕಾರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next