Advertisement

Mumbai; 90 ನಿಮಿಷದೊಳಗೆ ಅಪಹರಣಕ್ಕೊಳಗಾದ ಮಗುವನ್ನು ಪತ್ತೆ ಮಾಡಿದ ಶ್ವಾನ

05:39 PM Nov 30, 2023 | Team Udayavani |

ಮುಂಬಯಿ: ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕನನ್ನು ಮುಂಬೈ ಪೊಲೀಸರ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳದ ಶ್ವಾನ(ಸ್ನಿಫರ್ ಡಾಗ್) ಕೇವಲ 90 ನಿಮಿಷಗಳಲ್ಲಿ ಪತ್ತೆ ಮಾಡಿದೆ.

Advertisement

ಶುಕ್ರವಾರ ಮುಂಜಾನೆ ಅಂಧೇರಿ (ಪೂರ್ವ) ಉಪನಗರದಲ್ಲಿರುವ ಅಶೋಕ್ ನಗರ ಕೊಳೆಗೇರಿಯಲ್ಲಿರುವ ಮನೆಯಿಂದ 500 ಮೀಟರ್ ದೂರದಲ್ಲಿ ಡಾಬರ್‌ಮ್ಯಾನ್ ಶ್ವಾನ ಲಿಯೋ ಬಾಲಕನನ್ನು ಪತ್ತೆ ಹಚ್ಚಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಗುಡಿಸಲಿನ ಹೊರಗೆ ಆಟವಾಡುತ್ತಿದ್ದಾಗ ಅಪರಿಚಿತ ವ್ಯಕ್ತಿ ಮಗುವನ್ನು ಅಪಹರಿಸಿದ ನಂತರ ಬಾಲಕನ ಕುಟುಂಬವು ಮಧ್ಯರಾತ್ರಿಯ ನಂತರ ಪೊಲೀಸರನ್ನು ಸಂಪರ್ಕಿಸಿದ್ದರು.

ಹೊರಗೆ ಹೋಗುವ ಮುನ್ನ ಬಾಲಕ ಬಟ್ಟೆ ಬದಲಿಸಿದ್ದ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಪೋಲೀಸರು ಲಿಯೋನನ್ನು ಕರೆತಂದು ಹುಡುಗನ ಟೀ ಶರ್ಟ್ ಅನ್ನು ಮೂಸಲು ನೀಡಿದ್ದಾರೆ. ಕೂಡಲೇ ಲಿಯೋ ಪೊಲೀಸ್ ತಂಡವನ್ನು ಹುಡುಗನ ಬಳಿಗೆ ಕರೆದೊಯ್ದಿದ್ದು ಅಪರಿಚಿತ ಅಪಹರಣಕಾರರು ಭಯಭೀತರಾಗಿ ಬಿಟ್ಟು ಬಿಟ್ಟಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next