Advertisement

ದಾವೂದ್ ಇಬ್ರಾಹಿಂನ ಐವರು ಸಹಚರರನ್ನು ಬಂಧಿಸಿದ ಪೊಲೀಸರು

02:39 PM Oct 11, 2022 | Team Udayavani |

ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂನ ‘ಡಿ’ ಕಂಪನಿಗೆ ಸಂಬಂಧಿಸಿದ ಐವರನ್ನು ಮುಂಬೈ ಕ್ರೈಂ ಬ್ರಾಂಚ್ ಮಂಗಳವಾರ ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಸುಲಿಗೆ ಪ್ರಕರಣದಲ್ಲಿ ದರೋಡೆಕೋರ ಛೋಟಾ ಶಕೀಲ್‌ನ ಸೋದರ ಮಾವ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಮತ್ತು ಉದ್ಯಮಿ ರಿಯಾಜ್ ಭಾಟಿಯನ್ನು ಪೊಲೀಸರ ಸುಲಿಗೆ ನಿಗ್ರಹ ದಳ (ಎಇಸಿ) ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಕಠಿಣ ಆರೋಪ ಹೊರಿಸಿ ಇತ್ತೀಚೆಗೆ ಬಂಧಿಸಿತ್ತು.

ಇದನ್ನೂ ಓದಿ: ಜೈಲಿನಲ್ಲಿದ್ದ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಅಲ್ತಾಫ್ ಶಾ ನಿಧನ

ಪ್ರಕರಣದ ಹೆಚ್ಚಿನ ತನಿಖೆಯ ಸಮಯದಲ್ಲಿ, ಅಜಯ್ ಗಂಡ, ಫಿರೋಜ್ ಚಮ್ದಾ, ಸಮೀರ್ ಖಾನ್, ಪಾಪಾ ಪಠಾಣ್ ಮತ್ತು ಅಮ್ಜದ್ ರೆಡ್ಕರ್ ಎಂಬ ಐದು ಜನರ ಪಾತ್ರವು ಬೆಳಕಿಗೆ ಬಂದಿತ್ತು ಆದ್ದರಿಂದ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಹೊಂದಿದ್ದ ರಿಯಾಜ್ ಭಾಟಿಯನ್ನು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಬಂಧಿಸಲಾಗಿತ್ತು.

Advertisement

ವರ್ಸೋವಾದ ಉದ್ಯಮಿಯೊಬ್ಬರನ್ನು ಬೆದರಿಸಿ ಆತನಿಂದ 30 ಲಕ್ಷ ರೂ. ಮೌಲ್ಯದ ಕಾರು ಮತ್ತು 7.5 ಲಕ್ಷ ರೂ. ನಗದು ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರು ಮೊದಲು ತಿಳಿಸಿದ್ದರು. ಇಬ್ರಾಹಿಂ ಅವರ ಆಪ್ತ ಸಹಾಯಕ ಛೋಟಾ ಶಕೀಲ್ ಮತ್ತು ಶಕೀಲ್ ಸಂಬಂಧಿ ಸಲೀಂ ಫ್ರೂಟ್ ಅವರನ್ನೂ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ.

ಎಇಸಿ ಇತ್ತೀಚೆಗೆ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸಲೀಂ ನನ್ನು ಎನ್‌ಐಎ ವಶಕ್ಕೆ ತೆಗೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next