Advertisement

ಮುಂಬಯಿ: ಪೆಟ್ರೋಲ್‌ಗೆ 91 ರೂ.!

12:03 AM Jan 14, 2021 | Team Udayavani |

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತೀ ಲೀ.ಗೆ 25 ಪೈಸೆ ಏರಿಕೆಯಾಗಿದೆ. ಇದರಿಂದ ಮುಂಬಯಿಯಲ್ಲಿ ಪೆಟ್ರೋಲ್‌ ಬೆಲೆ 91.07 ರೂ., ಡೀಸೆಲ್‌ ಬೆಲೆ 81.34 ರೂ.ಗಳಿಗೆ ಏರಿದೆ. ಹೊಸದಿಲ್ಲಿಯಲ್ಲಿ ಇದು ಕ್ರಮವಾಗಿ 84.45 ರೂ., 74.63 ರೂ. ಆಗಿದೆ. ಬೆಂಗಳೂರಿನಲ್ಲಿ ಪ್ರತೀ ಲೀ. ಪೆಟ್ರೋಲ್‌ ಮೇಲೆ 26 ಪೈಸೆ ಏರಿಕೆಯಾಗಿ, 87.30 ರೂ.ಗಳಿಗೆ, ಪ್ರತೀ ಲೀಟರ್‌ ಡೀಸೆಲ್‌ ಮೇಲೆ 27 ಪೈಸೆ ಹೆಚ್ಚಳವಾಗಿ 79.14 ರೂ.ಗಳಿಗೆ ತಲುಪಿದೆ.

Advertisement

ಜ. 19ರಿಂದ ದಿನವೂ ರಾಜಧಾನಿ ಎಕ್ಸ್‌ಪ್ರೆಸ್‌ :

ಮುಂಬಯಿ: ಇಲ್ಲಿನ ಸಿಎಸ್‌ಎಂಟಿ – ಹಜರತ್‌ ನಿಜಾ ಮುದ್ದೀನ್‌ ರಾಜಧಾನಿ ಸೂಪರ್‌ಫಾಸ್ಟ್‌ ವಿಶೇಷ ರೈಲು ಜ. 19ರಿಂದ ವಾರದ 7 ದಿನವೂ ಸಂಚರಿಸಲಿದೆ ಎಂದು ಮಧ್ಯ ರೈಲ್ವೇ ಪ್ರಕಟಿಸಿದೆ. ಈ ರೈಲು ಉಡುಪಿ, ಮಂಗಳೂರು ಮೂಲಕ ಹಾದು ಹೋಗುತ್ತದೆ. ಹೆಚ್ಚುವರಿ ಸಂಚಾರಕ್ಕೆ ಬುಕಿಂಗ್‌ ಜ. 14ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next