Advertisement

ಮುಂಬೈಯಲ್ಲಿ ಕೋವಿಡ್ ಭೀತಿ : ಫೆ.26 ರಿಂದ ಅನಿರ್ಧಿಷ್ಟ ಕಾಲ ಓವಲ್‌ ಮೈದಾನ ಬಂದ್‌

07:23 PM Feb 25, 2021 | Team Udayavani |

ಮುಂಬೈ: ವರ್ಷದ ಬಹುತೇಕ ದಿನಗಳಲ್ಲಿ ಕ್ರಿಕೆಟ್‌, ಫ‌ುಟ್ಬಾಲ್‌ ಪಂದ್ಯಗಳಿಗೆ ಸಾಕ್ಷಿಯಾಗುತ್ತಿದ್ದ ಓವಲ್‌ ಮೈದಾನವನ್ನು ಕೊರೊನಾ ಹೆಚ್ಚಳ ಕಾರಣದಿಂದ ಫೆ.26ರಿಂದ ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಬಿಎಂಸಿ ತೀರ್ಮಾನಿಸಿದೆ.

Advertisement

ದಕ್ಷಿಣ ಮುಂಬೈನ ಓವಲ್‌ ಮೈದಾನವನ್ನು ಶುಕ್ರವಾರದಿಂದ ಮುಚ್ಚಲಾಗುತ್ತದೆ. ಕ್ರೀಡಾ ಚಟುವಟಿಕೆಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರುತ್ತಿರುವುದರಿಂದ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಮುಂದಿನ ಆದೇಶದವರೆಗೂ ಇಲ್ಲಿ ಯಾರಿಗೂ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ ಎಂದು ಬಿಎಂಸಿ ಸ್ಪಷ್ಟಪಡಿಸಿದೆ.
ಕ್ರೀಡಾಪಟುಗಳು, ಪ್ರೇಕ್ಷಕರಲ್ಲದೆ ಮುಂಜಾನೆ ವೇಳೆ ವಾಕಿಂಗ್‌, ಜಾಗಿಂಗ್‌ ಮಾಡಲೆಂದು ಸಾಕಷ್ಟು ಸಂಖ್ಯೆಯ ನಾಗರಿಕರೂ ಈ ಮೈದಾನವನ್ನು ಬಳಸಿಕೊಳ್ಳುತ್ತಿದ್ದರು.

ಇದನ್ನೂ ಓದಿ:ವಿಜಯಪುರ : ವಿಧವಾ ವೇತನ ನೀಡಲು ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

Advertisement

Udayavani is now on Telegram. Click here to join our channel and stay updated with the latest news.

Next