Advertisement

ಮುಂಬೈ: ಈರುಳ್ಳಿ ಸಗಟು ಬೆಲೆ ಕೆಜಿಗೆ 7- 8 ರೂ.ಗೆ ಇಳಿಕೆ

03:15 AM May 07, 2022 | Team Udayavani |

ನವಿಮುಂಬಯಿ: ಯಥೇತ್ಛ ಪೂರೈಕೆ ಹಾಗೂ ಇತರ ಕೆಲವು ಕಾರಣಗಳಿಂದಾಗಿ ಈರುಳ್ಳಿ ಬೇಡಿಕೆ ಕುಸಿದಿದ್ದು, ವಾಶಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಸರಾಸರಿ ಖರೀದಿ ಬೆಲೆ ಕೆ.ಜಿ.ಗೆ 8 ರೂ.ಗೆ ಇಳಿದಿದೆ.

Advertisement

ವ್ಯಾಪಾರಿಗಳ ಪ್ರಕಾರ, ಬೇಸಗೆ ರಜೆಯಿಂದಾಗಿ ಅನೇಕ ಕುಟುಂಬಗಳು ಊರಿಗೆ ತೆರಳಿರುವುದು ಕೂಡ ಬೇಡಿಕೆ ಇಳಿಕೆಗೆ ಮತ್ತೊಂದು ಕಾರಣವಾಗಿದೆ.

ಕಳೆದ ವರ್ಷ ಮೇ-ಜೂನ್‌ ಅವಧಿಯಲ್ಲಿ ಈರುಳ್ಳಿ ಸಗಟು ದರ 10 ರೂ.ಗಿಂತ ಕಡಿಮೆಯಾಗಿತ್ತು. ಈ ವರ್ಷ ಈರುಳ್ಳಿ ಖರೀದಿ ದರ ಕನಿಷ್ಠ 7-8 ರೂ. ಆಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಗೆ 80 ರೂ.ಗೆ ತಲುಪಿತ್ತು. ಕಳೆದ ಸೆಪ್ಟಂಬರ್‌ನಲ್ಲಿ ಕೆ.ಜಿ.ಗೆ 90 ರೂ. ತಲುಪಿತ್ತು. ಅತಿವೃಷ್ಟಿಯಿಂದಾಗಿ ಬೆಳೆಗಳು ಹಾನಿಗೀಡಾ ಗಿದ್ದು, ಡಿಸೆಂಬರ್‌ನಲ್ಲಿ ಪೂರೈಕೆ ಕಡಿಮೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next