Advertisement

ಹೃದಯ ಶ್ರೀಮಂತಿಕೆ : ಪತ್ನಿಯ ಆಭರಣ ಮಾರಾಟ ಮಾಡಿ ಉಚಿತ ಆಕ್ಸಿಜನ್ ನೀಡುತ್ತಿರುವ ವ್ಯಕ್ತಿ

08:09 AM May 01, 2021 | Team Udayavani |

ಮುಂಬೈ :  ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಆಕ್ಸಿಜನ್ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ದಿನೇ ದಿನೇ ಅದೆಷ್ಟೋ ಜನ ಆಕ್ಸಿಜನ್ ಇಲ್ಲದೇ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಗಳು ಕೂಡ ಆಕ್ಸಿಜನ್ ಕೊರತೆಯನ್ನು ಹೆದರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮುಂಬೈನ ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಚಿನ್ನಾಭರಣಗಳನ್ನೇ ಮಾರಾಟ ಮಾಡಿ ಉಚಿತವಾಗಿ ಆಕ್ಸಿಜನ್ ವಿತರಣೆ ಮಾಡುತ್ತಿದ್ದಾರೆ.

Advertisement

ಹೌದು ಮುಂಬೈನ ಪ್ಯಾಸ್ಕಲ್ ಸಲ್ಧಾನಾ ಎಂಬುವವರು ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಉಚಿತವಾಗಿ ಆಮ್ಲಜನಕವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಪತ್ನಿ ಕಳೆದ ಐದು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಡಯಾಲಿಸಿಸ್ ಇದೆ. ಈ ಕಾರಣದಿಂದ ನಮ್ಮ ಮನೆಯಲ್ಲಿ ಯಾವಾಗಲೂ ಆಕ್ಸಿಜನ್ ಸಿಲಿಂಡರ್ ಗಳು ಇರುತ್ತವೆ ಎಂದಿದ್ದಾರೆ.

ಒಮ್ಮೆ ನಮ್ಮ ಪ್ರದೇಶದ ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ ನನ್ನ ಪತಿಗೆ ಆಕ್ಸಿಜನ್ ಅವಶ್ಯಕತೆ ಇದೆ ಎಂದಾಗ ಅವರಿಗೆ ನಾನು ತಕ್ಷಣ ಪೂರೈಕೆ ಮಾಡಿದೆ ಎಂದು ಪ್ಯಾಸ್ಕಲ್ ಸಲ್ಧಾನಾ ತಿಳಿಸಿದ್ದಾರೆ.

Advertisement

ಉಚಿತ ಆಕ್ಸಿಜನ್ ನೀಡಲು ಪ್ಯಾಸ್ಕಲ್ ಸಲ್ಧಾನಾ ಪತ್ನಿ ಒತ್ತಾಯ ಮಾಡಿದ್ದಾರಂತೆ. ಅಲ್ಲದೆ ಆಭರಣಗಳನ್ನು ಮಾರಾಟ ಮಾಡಿ ಆಮ್ಲಜನಕವನ್ನು ಪೂರೈಕೆ ಮಾಡಿ ಎಂದೂ ಹೇಳಿದ್ದರಂತೆ. ಇದೇ ಕಾರಣಕ್ಕೆ ಚಿನ್ನವನ್ನು ಮಾರಿ ಅದರಿಂದ ಬಂದ 80,000 ರೂ. ನಲ್ಲಿ ಉಚಿತವಾಗಿ ಆಮ್ಲಜನಕ ನೀಡುತ್ತಿದ್ದೇವೆ ಎಂದು ಪ್ಯಾಸ್ಕಲ್ ಸಲ್ಧಾನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next