ಮುಂಬಯಿ: ಅಪಾಯಕಾರಿ ಬೈಕ್ ಸಾಹಸ ಮಾಡಿದ ಕಾರಣ ಟ್ರಾಫಿಕ್ ಪೊಲೀಸರು ಸವಾರ ಹಾಗೂ ಅವನ ಜತೆಯಲ್ಲಿದ್ದ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮುಂಬಯಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ಹೋಗಿದ್ದಾನೆ. ಒಬ್ಬ ಯುವತಿ ಸವಾರನ ಕಡೆ ಮುಖ ಮಾಡಿ ಅಪ್ಪಿಕೊಂಡು ಕೂತಿದ್ದು, ಮತ್ತೊಂದು ಹುಡುಗಿ ಸವಾರನ ಹಿಂದೆ ಅಪ್ಪಿಕೊಂಡು ಕೂತಿದ್ದಾಳೆ. ವೇಗವಾಗಿ ಹೋಗುತ್ತಾ ಒಂದು ಚಕ್ರವನ್ನು ಎತ್ತಿ ಹುಡುಗ ವೀಲಿಂಗ್ ಮಾಡಿಕೊಂಡು ಹೋಗಿದ್ದಾನೆ. ಇಬ್ಬರು ಹುಡುಗಿಯರು ಪಯಣವನ್ನು ಜಾಲಿ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಕೋವಿಡ್ ಹೆಚ್ಚಳ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ
13 ಸೆಕೆಂಡ್ ಗಳ ವಿಡಿಯೋ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಪ್ರಕರಣವನ್ನು ದಾಖಲಿಸಿ ಬೈಕ್ ಸವಾರ ಹಾಗೂ ಇಬ್ಬರು ಯುವತಿಯರ ಹುಡುಕಾಟ ನಡೆಸುತ್ತಿದ್ದಾರೆ.
Related Articles
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸರು ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279 (ಅತಿವೇಗದ ಚಾಲನೆ) ಮತ್ತು 336 (ಜೀವಕ್ಕೆ ಅಪಾಯ) ಮತ್ತು ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೇವಲ ದಂಡ ಮಾತ್ರವಲ್ಲ, ಈ ವೀಡಿಯೊದಲ್ಲಿ ಕಂಡುಬರುವ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಅವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಾಫಿಕ್ ಪೊಲೀಸ್ ಟ್ವೀಟ್ ಮಾಡಿದೆ.