Advertisement

ರೈಲು ಡಿಕ್ಕಿ ಹೊಡೆದು ಮೂವರು ರೈಲ್ವೇ ಕಾರ್ಮಿಕರು ಮೃತ್ಯು… ಸಿಗ್ನಲ್ ದುರಸ್ತಿ ವೇಳೆ ಘಟನೆ

04:01 PM Jan 23, 2024 | |

ಮುಂಬಯಿ: ರೈಲು ಡಿಕ್ಕಿ ಹೊಡೆದು ಮೂವರು ರೈಲ್ವೇ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಕರ್ ಜಿಲ್ಲೆಯಲ್ಲಿ ಸಂಭವಿಸಿದೆ.

Advertisement

ಸೋಮವಾರ ರಾತ್ರಿ ವಸಾಯಿ ಬಳಿ ರೈಲ್ವೆ ಸಿಗ್ನಲ್ ದುರಸ್ತಿಗೊಳಿಸುತಿದ್ದ ಸಂದರ್ಭ ಲೋಕಲ್ ರೈಲು ಡಿಕ್ಕಿ ಹೊಡೆದಿದೆ ಪರಿಣಾಮ ಮೂವರು ಪಶ್ಚಿಮ ರೈಲ್ವೆ ನೌಕರರು ಮೃತಪಟ್ಟಿದ್ದಾರೆ. ವಸಾಯಿ ಮತ್ತು ನೈಗಾಂವ್ ನಿಲ್ದಾಣಗಳ ನಡುವೆ ಸೋಮವಾರ ರಾತ್ರಿ 8.55 ಕ್ಕೆ ಅಪಘಾತ ಸಂಭವಿಸಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ಮುಖ್ಯ ಸಿಗ್ನಲಿಂಗ್ ಇನ್ಸ್‌ಪೆಕ್ಟರ್ (ಭಯಂದರ್) ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ (ವಸಾಯಿ ರಸ್ತೆ) ಸೋಮನಾಥ ಉತ್ತಮ್ ಲಂಬುಟ್ರೆ ಮತ್ತು ಸಹಾಯಕ ಸಚಿನ್ ವಾಂಖಡೆ ಎಂದು ಗುರುತಿಸಲಾಗಿದೆ.

ಎಲ್ಲಾ ಉದ್ಯೋಗಿಗಳು ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದ ಸಿಗ್ನಲಿಂಗ್ ವಿಭಾಗದಲ್ಲಿ ಕೆಲಸ ಮಾಡುತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶ್ಚಿಮ ರೈಲ್ವೇ ಅಧಿಕಾರಿಗಳು ಮೃತ ಕುಟುಂಬಕ್ಕೆ ತಲಾ 55,000 ರೂ.ಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next