ಮುಂಬಯಿ: ಕೊರೊನಾ ಎರಡನೇ ಅಲೆ ಕಡಿಮೆಯಾಗಲು ಪ್ರಾರಂಭಿಸಿ ದ್ದರೂ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ಆದರೆ ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣದಲ್ಲಿ ಕೊರೊನಾ ಸಂಕಷ್ಟ ಮುಂದುವರಿದಿದೆ.
ಕೊಲ್ಹಾಪುರ, ಸತಾರಾ, ಪುಣೆ, ರತ್ನಾಗಿರಿ, ಸಿಂಧುದುರ್ಗಾ ಮತ್ತು ರಾಯಗಢ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿರುವುದರಿಂದ ಜಿಲ್ಲೆಯಲ್ಲಿನ ನಿರ್ಬಂಧಗಳನ್ನು ಬಿಗಿಗೊಳಿಸುವುದರ ಜತೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಒತ್ತು ನೀಡುವಂತೆ ಪರಿಹಾರ ಮತ್ತು ಪುನರ್ವಸತಿ ಇಲಾಖೆಯಿಂದ ಸೂಚನೆಗಳನ್ನು ನೀಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರ ಣಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ವಾರಕ್ಕೊಮ್ಮೆ ನಡೆಯುವ ಕೊರೊನಾ ಪಾಸಿಟಿವ್ ದರ ಮತ್ತು ಆಮ್ಲಜನಕಯುಕ್ತ ಹಾಸಿಗೆಗಳ ಮಾನದಂಡಗಳ ಆಧಾರದ ಮೇಲೆ ಮನಪಾ ಮತ್ತು ಜಿಲ್ಲಾವಾರು ನಿರ್ಬಂಧ ಸಡಿಲಿಸುವ ನೀತಿಯನ್ನು ಸರಕಾರ ಕಳೆದ 2 ವಾರಗಳಿಂದ ಜಾರಿಗೆ ತಂದಿದೆ. ಅದರ ಪ್ರಕಾರ ಸೋಮವಾರದಿಂದ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲವು ನಿರ್ಬಂಧ ಸಡಿಲಿಸ ಲಾಗಿದೆ. ಮುಂಬಯಿ, ನಾಸಿಕ್‌ನಂತಹ ನಗರ ಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದರೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ
ಗ್ರಾಮೀಣ ಭಾಗಗಳಲ್ಲಿ ಕೊರೊನಾ ಆರ್ಭಟರಾಜ್ಯದ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧ ಗಳನ್ನು ಸಡಿಲಗೊಳಿಸಿದ್ದರಿಂದ ಆಡಳಿತ ಮತ್ತು ಜನರು ನಿಟ್ಟುಸಿರು ಬಿಟ್ಟರೂ ಆರು ಜಿಲ್ಲೆಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಳೆದ ತಿಂಗಳಿನಿಂದ ಹೆಚ್ಚುತ್ತಿದೆ. ಪ್ರಸ್ತುತ ಕೊಲ್ಹಾಪುರ ಜಿಲ್ಲೆಯಲ್ಲಿ ಅತೀಹೆಚ್ಚು ಕೊರೊನಾ ಪ್ರಕರಣಗಳು ಕಂಡುಬರುತ್ತಿದ್ದು, ಜಿಲ್ಲೆಯಲ್ಲಿ ಪ್ರತೀದಿನ ಸಾವಿರಕ್ಕೂ ಹೆಚ್ಚು ರೋಗಿಗಳು ದಾಖಲಾಗುತ್ತಿದ್ದಾರೆ.
ಸತಾರಾ ಮತ್ತು ಪುಣೆಯ ಗ್ರಾಮೀಣ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿಯಿದ್ದು, ಸಾಂಗ್ಲಿ ಜಿಲ್ಲೆಯಲ್ಲೂ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ.ರಾಯಗಢದಲ್ಲಿ ಇನ್ನಷ್ಟು ಆತಂಕಕೊಲ್ಹಾಪುರ ಜಿಲ್ಲೆಯ ಪಕ್ಕದಲ್ಲಿರುವ ಸಿಂಧುದುರ್ಗಾ ಮತ್ತು ರತ್ನಾಗಿರಿ ಜಿಲ್ಲೆ ಗಳಲ್ಲಿ ಸೋಂಕಿತರ ದೈನಂದಿನ ಸಂಖ್ಯೆ 800ರಿಂದ 900ರ ವರೆಗೆ ಇದೆ. ರಾಯಗಢ ಜಿಲ್ಲೆಯ ಕೊರೊನಾ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ. ಈ ಎಲ್ಲ ಜಿಲ್ಲೆಗಳು ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಕೊರೊನಾ ಹಾಟ್‌ಸ್ಪಾಟ್‌ಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಈ ಜಿಲ್ಲೆಯ ಕೊರೊನಾ ಸರಪಳಿಯನ್ನು ಸಮಯಕ್ಕೆ ಮುರಿಯದಿದ್ದರೆ ಇತರ ಜಿಲ್ಲೆಗಳಿಗೂ ಹರಡುವ ಅಪಾಯವಿದೆ ಎಂದು ಮೂಲಗಳು ತಿಳಿಸಿವೆ.