Advertisement

ಮುಂಬಯಿ ಕನ್ನಡ ಸಂಘ: 51ನೇ ವಾರ್ಷಿಕ ಶ್ರೀ ಗಣೇಶೋತ್ಸವ

03:20 PM Sep 07, 2017 | |

ಮುಂಬಯಿ: ಮುಂಬಯಿ ಕನ್ನಡ ಸಂಘದ ಆಶ್ರಯದಲ್ಲಿ 51ನೇ ವಾರ್ಷಿಕ ಶ್ರೀ ಗಣೇಶೋತ್ಸವ ಸಂಭ್ರಮವು ಆ. 25ರಿಂದ ಆ. 27 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾಟುಂಗ ಪೂರ್ವದ ವಾಚನಾಲಯದಲ್ಲಿ ಆಚರಿಸಲಾಯಿತು. ಆ. 25ರಂದು ಪೂರ್ವಾಹ್ನ 9ರಿಂದ ಡಿ. ಆರ್‌. ರೇವಣRರ್‌ ದಂಪತಿ ವಿಗ್ರಹ ಪ್ರತಿಷ್ಠಾಪನೆಗೈದು ಪೂಜೆ ನಡೆಸಿದರು.

Advertisement

ಸಂಜೆ 6.30ರಿಂದ ಮುಲುಂಡ್‌ನ‌ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ವಿದ್ವಾಂಸ ಪವನ್‌ ಆಚಾರ್ಯ ಅವರಿಂದ ಪ್ರವಚನ ನಡೆಯಿತು. ಆ. 26 ರಂದು ಸಂಘದ ಕನ್ನಡ ಸರ್ಟಿಫಿಕೇಟ್‌ ವಿದ್ಯಾರ್ಥಿ ವೃಂದದವರ ವತಿಯಿಂದ ಸಂಜೆ 7 ರಿಂದ ಭಜನೆ ಮತ್ತು ಸಂಗೀತ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು. ಪಕ್ಕವಾದ್ಯದಲ್ಲಿ ತಬಲಾದಲ್ಲಿ ಪ್ರಕಾಶ್‌ ನಾಯಕ್‌ ಮತ್ತು ಹಾರ್ಮೋನಿಯಂನಲ್ಲಿ ರವೀಂದ್ರ ಲೊಂಟೆ ಅವರು ಸಹಕರಿಸಿದರು.

ಆ. 27ರಂದು ದೇವಾನಂದ, ವಿದ್ವಾನ್‌ ಟಿ. ಎನ್‌. ಅಶೋಕ್‌, ಎಸ್‌. ಕೆ. ಪದ್ಮನಾಭ, ನಿರ್ಮಲಾ ಶೆಣೈ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಮುಖ್ಯ ಅತಿಥಿಯಾಗಿ ಐಡಿಬಿಐ ಬ್ಯಾಂಕ್‌ನ ಸತಾರಾ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಜಿ. ಡಿ. ಪೈ ಆಗಮಿಸಿ ಮಾತನಾಡಿ, ತನ್ನ ಹಾಗೂ ಸಂಘದ ಸಂಬಂಧ ಬಹಳ ವರ್ಷದ್ದು, ಸಂಘದ ಕಿರು ಸಭಾಗೃಹದ ಯೋಜನೆಗೆ ಎಲ್ಲರೂ ಸಹಕಾರ ನೀಡಬೇಕು. ತನ್ನಿಂದಾಗುವ ಎಲ್ಲಾ ರೀತಿಯ ಸಹಕಾರವನ್ನು ಮಾಡಲು ಸಿದ್ಧನಿದ್ದೇನೆ ಎಂದರು.

ಸಂಘದ ಅಧ್ಯಕ್ಷ ಜಿ. ಎಸ್‌. ನಾಯಕ್‌ ಸ್ವಾಗತಿಸಿದರು. ಸೋಮನಾಥ ಕರ್ಕೇರ ಅತಿಥಿಗಳನ್ನು ಪರಿಚಯಿಸಿದರು. ಜಿ. ಡಿ. ಪೈ ಅವರನ್ನು ಸಂಘದ ಪದಾಧಿಕಾರಿಗಳು ಗೌರವಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವಕ್ಕೆ ಅತೀ ಹೆಚ್ಚು ದೇಣಿಗೆ ಸಂಗ್ರಹಿಸಿದ ಎಸ್‌. ಕೆ. ಪದ್ಮನಾಭ, ಗುರುರಾಜ ಎಸ್‌. ನಾಯಕ್‌, ಸತೀಶ್‌ ಎಸ್‌. ಬಂಗೇರ, ರಾಜೇಂದ್ರ ಗಡಿಯಾರ್‌, ಬಾಬುರಾಯ ಎಂ. ಪ್ರಭು ಅವರನ್ನು ಗೌರವಿಸಲಾಯಿತು.
ದಾನಿಗಳಾದ ಪ್ರಫುಲ್ಲಾ ಉರ್ವಾಳ್‌ ಅವರನ್ನು ಗೌರವಿಸಲಾಯಿತು. ಮಹಾಪ್ರಸಾದದ ಪ್ರಾಯೋಜಕರಾಗಿ ವೆಂಕಟೇಶ್‌ ಡಿ. ಸರಾಫ್‌ ಮತ್ತು ತ್ರಿಮೂರ್ತಿ ಜ್ಯುವೆಲ್ಲರಿ ಮಾಲಕ ಡಿ. ಆರ್‌. ಶಿವಾಣRರ್‌ ಅವರು ಸಹಕರಿಸಿದರು. ಗಣಪತಿ ವಿಗ್ರಹಕ್ಕೆ ಚಿತಾಲೆ ಬಂಧು. ಎಸ್‌. ವಿ. ಮೋಹನ್‌,  ತ್ರಿವೇಣಿ ಮೋಹನ್‌, ವೆಂಕಟೇಶ್‌ ಡಿ. ಸರಾಫ್‌ ಅವರು ದಾನಿಗಳಾಗಿ ಸಹಕರಿಸಿದರು.

ಡಾ| ಎಸ್‌. ಕೆ. ಭವಾನಿ, ಸಂಧ್ಯಾ ಎ. ಪ್ರಭು, ಶ್ರೀಕಾಂತ್‌ ಪ್ರಭು, ದಾಮೋದರ ನಾಯ್ಕ, ನಾರಾಯಣ ರಾವ್‌, ರಾಮಚಂದ್ರ ಕಾಮತ್‌, ಶಾರದಾ ಯು. ಅಂಬೆಸಂಗೆ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಘದ ಕೋಶಾಧಿಕಾರಿ ಸುಧಾಕರ ಸಿ. ಪೂಜಾರಿ ವಂದಿಸಿದರು. ಮಹಾಮಂಗಳಾರತಿಯ ಬಳಿಕ ವಿಸರ್ಜನ ಮೆರವಣಿಗೆ ನಡೆಯಿತು.

Advertisement

ಇದೇ ಸಂದರ್ಭ ಕಳೆದ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಕನ್ನಡ ವಿಭಾಗ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಜೀವ ಆಚಾರ್ಯ ಸಾಂಗ್ಲಿ ಅರ್ಚಕರಾಗಿ ಸಹಕರಿಸಿದರು. ಹೂವಿನ ಅಲಂಕಾರದ ಪ್ರಾಯೋಜಕರಾಗಿ ಯೋಗೀಶ್‌ ಶೆಣೈ ಮತ್ತು ಕೆ. ವೆಂಕಟೇಶ್‌ ಭಟ್‌ ಅವರು ಸಹಕರಿಸಿದರು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next