Advertisement

ಮುಂಬಯಿ ಅಗ್ನಿ ದುರಂತಕ್ಕೆ short circuit ಕಾರಣ: ತನಿಖೆ

04:34 PM Dec 30, 2017 | Team Udayavani |

ಮುಂಬಯಿ : ನಗರದ ಲೋವರ್‌ ಪರೇಲ್‌ ಪ್ರದೇಶದಲ್ಲಿನ ಕಮಲಾ ಮಿಲ್ಸ್‌ ಕಾಂಪ್ಲೆಕ್ಸ್‌ನಲ್ಲಿ 14 ಜೀವಗಳನ್ನು ಬಲಿಪಡೆದ ಭೀಕರ ಅಗ್ನಿ ದುರಂತಕ್ಕೆ ಶಾರ್ಟ್‌ ಸರ್‌ಕ್ಯೂಟ್‌ ಕಾರಣವೆಂದು ಮುಂಬಯಿ ಪೊಲೀಸರು ನಡೆಸಿರುವ ತನಿಖೆಯಿಂದ ಗೊತ್ತಾಗಿದೆ.

Advertisement

ಮೇಲಾಗಿ ಅತ್ಯಂತ ದಹನಕಾರಿಯಾಗಿರುವ ಟಾರ್ಪಾಲಿನ್‌ ಶೀಟ್‌ಗಳನ್ನು ಶೆಡ್‌ಗಳಿಗಾಗಿ ಬಳಸಿರುವುದು ಕೂಡ ಬೆಂಕಿ ಬಹಬೇಗನೆ ಪಬ್‌ ಸಹಿತ ಎಲ್ಲೆಡೆ ಆವರಿಸಿಕೊಂಡು ಹದಿನಾಲ್ಕು ಜೀವಗಳು ಸುಟ್ಟುಕರಕಲಾಗಲು ಕಾರಣವಾಗಿವೆ ಎಂದು ತನಿಖೆ ತಿಳಿಸಿದೆ.

ರಸ್ಟೋರೆಂಟ್‌ ಕಮ್‌ ಬಾರ್‌ ತನ್ನ ಶೆಡ್‌ಗಳಿಗಾಗಿ ಅತ್ಯಂತ ಜ್ವಲನಕಾರಿ ಟಾರ್ಪಾಲಿನ್‌ ಶೀಟ್‌ಗಳನ್ನು ಬಳಸಿತ್ತು; ವಿದ್ಯುತ್‌ ಶಾರ್ಟ್‌ ಸರ್‌ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಾಗ ಅದು ಟಾರ್ಪಾಲಿನ್‌ ಶೀಟ್‌ಗಳಿಂದಾಗಿ ಎಲ್ಲೆಡೆ ಶರವೇಗದಲ್ಲಿ ಪಸರಿಸಿತು ಎಂದು ತನ್ನ ಗುರುತು ತಿಳಿಸಿಬಯಸದ ಅಧಿಕಾರಿಯೋರ್ವರು ಹೇಳಿದರು. 

ಬೆಂಕಿ ಹೊತ್ತಿಕೊಂಡಾಕ್ಷಣವೇ 1 Above ಮ್ಯಾನೇಜರ್‌ಗಳು ಮತ್ತು ಸಿಬಂದಿಗಳು ಅಲ್ಲಿಂದ ಪರಾರಿಯಾದರು. ತಮ್ಮ ಗಿರಾಕಿಗಳನ್ನು ರಕ್ಷಿಸುವಲ್ಲಿ ಅವರ ವಿಫ‌ಲರಾದರು. ಒನ್‌ ಅಬೌವ್‌ ಪಬ್‌ಗ ಊಟಕ್ಕೆ ಬಂದವರು ಮತ್ತು ಇತರ ಗಿರಾಕಿಗಳು ಸೇರಿ ಒಟ್ಟು 14 ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾದರು. ಮೋಜೋ ಬಿಸ್‌ಟ್ರೋ ದ ಯಾರೂ ಕೂಡ ಬೆಂಕಿ ಅವಘಡದಲ್ಲಿ ಸತ್ತಿಲ್ಲ; ಆದರೆ 1 Above ನಲ್ಲಿ ಊಟ ಮಾಡುತ್ತಿದ್ದ ಎಲ್ಲರೂ ಮೃತಪಟ್ಟರು ಎಂದು ಆ ಅಧಿಕಾರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next