Advertisement

ಬಯಲು ಶೌಚ ಮುಕ್ತವಾಗದ ಮುಂಬಯಿ

10:52 AM Oct 14, 2019 | Team Udayavani |

ಮುಂಬಯಿ: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಬಯಲು ಶೌಚ ಮುಕ್ತ ದೇಶ ಎಂದು ಘೋಷಿಸಿದ್ದಾರೆ. ಆದರೆ ಭಾರತದಲ್ಲಿ ಇನ್ನೂ ಬಯಲು ಶೌಚಾಲಯಗಳು ಕಂಡುಬರುತ್ತಿವೆ. ಮುಂಬಯಿನ ಮಾಹಿಮ್ ನಲ್ಲಿ  2014 ಮತ್ತು 2019ರ ಮಧ್ಯೆ ಯಾವುದೇ ಬದಲಾದ ಪರಿಸ್ಥಿತಿ ಕಂಡು ಬರುತ್ತಿಲ್ಲ.

Advertisement

2014ರಲ್ಲಿ ಬಯಲು ಶೌಚ ಮುಕ್ತ ಮಾಡುವ ಪಣತೊಟ್ಟ ಕೇಂದ್ರ ಸರಕಾರ 2019ರ ವೇಳೆ ಪ್ರತಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿತ್ತು. ಆದರೆ ಇಂದು ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಶೇ. 99 ಶೌಚಾಲಯಗಳು ನಿರ್ಮಾಣಗೊಂಡಿವೆ. ಆದರೆ ಜನರು ಅದನ್ನು ಬಳಸಲು ಮುಂದಾಗುತ್ತಿಲ್ಲ. ತಮ್ಮ ಮನೆಯಲ್ಲಿ ಶೌಚಾಲಯ ಇದ್ದರೂ ಅದನ್ನು ಬಳಸುತ್ತಿಲ್ಲ. ಬದಲಾಗಿ ಬಯಲನ್ನೇ ಶೌಚಾಲಯವನ್ನಾಗಿಸುತ್ತಿದ್ದಾರೆ.

ಮುಂಬಯಿನ ಮಹಿಮ್ ರೈಲು ನಿಲ್ದಾಣದಲ್ಲಿ ಶೌಚಾಲಯವನ್ನು ಬಳಸದೇ ಬಯಲಿನಲ್ಲೇ ಪೂರೈಸುತ್ತಿದ್ದಾರೆ. ಇಂತಹ ಘಟನೆಗಳು ಈ ನಗರದ ಸುತ್ತಲಿನ ಹಳ್ಳಿಗಳಲ್ಲಿ, ರೈಲು ಹಳಿಗಳ ಮೇಲೆ, ರೈಲು ನಿಲ್ದಾಣಗಳಲ್ಲಿ ಕಂಡುಬರುತ್ತಿದೆ. 2018ರಲ್ಲೇ ರಾಜ್ಯ ಬಯಲು ಮಲ ವಿಸರ್ಜನೆ ಮುಕ್ತ ಎಂದು ಮಹಾರಾಷ್ಟ್ರ ಸರಕಾರ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next