Advertisement

IPL 2020: ಡೆಲ್ಲಿ ಚೆಲ್ಲಾಪಿಲ್ಲಿ; ಮುಂಬೈ ಫೈನಲ್‌ಗೆ ಲಗ್ಗೆ

11:24 PM Nov 05, 2020 | mahesh |

ದುಬಾೖ: ಡೆಲ್ಲಿ ಮೇಲೆ ಎಲ್ಲ ದಿಕ್ಕುಗಳಿಂದಲೂ ಘಾತಕ ಪ್ರಹಾರವಿಕ್ಕಿದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 2020ರ ಐಪಿಎಲ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಗುರುವಾರದ ಮೊದಲ ಕ್ವಾಲಿಫೈಯರ್‌ನಲ್ಲಿ ಅದು 57 ರನ್ನುಗಳ ಜಯಭೇರಿ ಮೊಳಗಿಸಿತು.

Advertisement

“ಡ್ಯಾಶಿಂಗ್‌ ಬ್ಯಾಟಿಂಗ್‌’ ನಡೆಸಿದ ಮುಂಬೈ 5 ವಿಕೆಟಿಗೆ ಭರ್ತಿ 200 ರನ್‌ ಪೇರಿಸಿದರೆ, ಡೆಲ್ಲಿ 8ಕ್ಕೆ 143 ರನ್‌ ಮಾಡಿತು. ಅಯ್ಯರ್‌ ಬಳಗವಿನ್ನು 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅದೃಷ್ಟವನ್ನು ಪರೀಕ್ಷಿಸಬೇಕಿದೆ.

ಟ್ರೆಂಟ್‌ ಬೌಲ್ಟ್ ಅವರ ಮೊದಲ ಓವರಿನಲ್ಲೇ ಡೆಲ್ಲಿಯ 2 ವಿಕೆಟ್‌ ಹಾರಿಹೋಯಿತು. ಖಾತೆ ತೆರೆಯುವ ಮೊದಲೇ 3ನೇ ವಿಕೆಟ್‌ ಕೂಡ ಬಿತ್ತು. ಆಗಲೇ ಅಯ್ಯರ್‌ ಪಡೆಯ ಅವಸ್ಥೆಯ ಅರಿವಾಯಿತು. ಈ ಆಘಾತದಿಂದ ಅದು ಚೇತರಿಸಿಕೊಳ್ಳಲೇ ಇಲ್ಲ. ಸ್ಟೋಯಿನಿಸ್‌ 65 ರನ್‌ ಸಿಡಿಸಿದರೂ ಆಗಲೇ ಕಾಲ ಮಿಂಚಿತ್ತು. ಬುಮ್ರಾ ಕೇವಲ 14 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತು ಡೆಲ್ಲಿಯನ್ನು ಎದ್ದೇಳದಂತೆ ಮಾಡಿದರು.

ಮುಂಬೈ ಭರ್ಜರಿ ಬ್ಯಾಟಿಂಗ್‌
ಸೂರ್ಯಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಅವರ ಅರ್ಧ ಶತಕ; ಡಿ ಕಾಕ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್‌ ಮುಂಬೈ ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯಿತು.

ಕೊನೆಯಲ್ಲಿ ಸಿಡಿದು ನಿಂತ ಇಶಾನ್‌ ಕಿಶನ್‌ ಮತ್ತು ಹಾರ್ದಿಕ್‌ ಪಾಂಡ್ಯ 23 ಎಸೆತಗಳಲ್ಲಿ 60 ರನ್‌ ಸೂರೆಗೈದದ್ದು ಮುಂಬೈ ಸರದಿಯ ಹೈಲೈಟ್‌ ಆಗಿತ್ತು. ಕಿಶನ್‌ ಅಜೇಯ 55 (30 ಎಸೆತ, 4 ಬೌಂಡರಿ, 3 ಸಿಕ್ಸರ್‌), ಪಾಂಡ್ಯ ಕೇವಲ 14 ಎಸೆತಗಳಿಂದ ಅಜೇಯ 37 ರನ್‌ ಸಿಡಿಸಿದರು. ಇದರಲ್ಲಿ 5 ಪ್ರಚಂಡ ಸಿಕ್ಸರ್‌ ಒಳಗೊಂಡಿತ್ತು.

Advertisement

ರೋಹಿತ್‌ ಗೋಲ್ಡನ್‌ ಡಕ್‌
ಸ್ಯಾಮ್ಸ್‌ ಅವರ ಮೊದಲ ಓವರಿನಲ್ಲೇ 15 ರನ್‌ ಬಾರಿಸಿದ ಮುಂಬೈ ಸ್ಫೋಟಕ ಆಟದ ಸೂಚನೆ ನೀಡಿತು. ಅಷ್ಟೂ ರನ್‌ ಡಿ ಕಾಕ್‌ ಬ್ಯಾಟಿನಿಂದ ಸಿಡಿದಿತ್ತು. ಆದರೆ 2ನೇ ಓವರಿನಲ್ಲಿ ಅಶ್ವಿ‌ನ್‌ ದೊಡ್ಡ ಬೇಟೆಯಾಡಿದರು. ನಾಯಕ ರೋಹಿತ್‌ ಶರ್ಮ ಅವರನ್ನು “ಗೋಲ್ಡನ್‌ ಡಕ್‌’ ಬಲೆಗೆ ಬೀಳಿಸಿದರು. ಆದರೆ ಇದರಿಂದ ಡಿ ಕಾಕ್‌ ಬ್ಯಾಟಿಂಗಿ ಗೇನೂ ಅಡ್ಡಿಯಾಗಲಿಲ್ಲ. ಅನಂತರ ಕ್ರೀಸಿಗೆ ಬಂದ ಸೂರ್ಯಕುಮಾರ್‌ ಯಾದವ್‌ ಕೂಡ ಮುನ್ನುಗ್ಗಿ ಬಾರಿಸತೊಡಗಿದರು. ಇಬ್ಬರೂ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿದರು. ಪವರ್‌ ಪ್ಲೇಯಲ್ಲಿ 63 ರನ್‌ ಹರಿದು ಬಂತು.

ಡಿ ಕಾಕ್‌-ಸೂರ್ಯಕುಮಾರ್‌ ಜೋಡಿಯಿಂದ ದ್ವಿತೀಯ ವಿಕೆಟಿಗೆ 6.1 ಓವರ್‌ಗಳಿಂದ 62 ಒಟ್ಟು ಗೂಡಿತು. ಈ ಜೋಡಿಯನ್ನೂ ಅಶ್ವಿ‌ನ್‌ ಮುರಿದರು. 25 ಎಸೆತಗಳಿಂದ 40 ರನ್‌ ಮಾಡಿದ ಡಿ ಕಾಕ್‌ (5 ಫೋರ್‌, 1 ಸಿಕ್ಸರ್‌) ಲಾಂಗ್‌ ಆಫ್ನಲ್ಲಿದ್ದ ಧವನ್‌ಗೆ ಕ್ಯಾಚ್‌ ನೀಡಿದರು.

12ನೇ ಓವರಿನಲ್ಲಿ ತಂಡದ ಮೊತ್ತ ನೂರರ ಗಡಿ ಮುಟ್ಟುವ ಜತೆಗೇ ಅರ್ಧ ಶತಕ (51) ಬಾರಿಸಿದ ಸೂರ್ಯಕುಮಾರ್‌ ವಿಕೆಟ್‌ ಕೂಡ ಬಿತ್ತು. ಈ ವಿಕೆಟ್‌ ನೋರ್ಜೆ ಪಾಲಾಯಿತು. ಎಂದಿನ ಬ್ಯಾಟಿಂಗ್‌ ಅಬ್ಬರ ತೋರಿದ ಸೂರ್ಯ 38 ಎಸೆತ ಎದುರಿಸಿ, 6 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು.ಮುಂದಿನ ಓವರಿನಲ್ಲೇ ಅಶ್ವಿ‌ನ್‌ ಅಪಾಯಕಾರಿ ಪೊಲಾರ್ಡ್‌ ಅವರನ್ನು ಬಂದಂತೆಯೇ ವಾಪಸ್‌ ಅಟ್ಟಿದರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಧವನ್‌ ಬಿ ಅಶ್ವಿ‌ನ್‌ 40
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಬಿ ಅಶ್ವಿ‌ನ್‌ 0
ಸೂರ್ಯಕುಮಾರ್‌ ಸಿ ಸ್ಯಾಮ್ಸ್‌ ಬಿ ನೋರ್ಜೆ 51
ಇಶಾನ್‌ ಕಿಶನ್‌ ಔಟಾಗದೆ 55
ಕೈರನ್‌ ಪೊಲಾರ್ಡ್‌ ಸಿ ರಬಾಡ ಬಿ ಅಶ್ವಿ‌ನ್‌ 0
ಕೃಣಾಲ್‌ ಪಾಂಡ್ಯ ಸಿ ಸ್ಯಮ್ಸ್‌ ಬಿ ಸ್ಟೋಯಿನಿಸ್‌ 13
ಹಾರ್ದಿಕ್‌ ಪಾಂಡ್ಯ ಔಟಾಗದೆ 37

ಇತರ 4
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 200
ವಿಕೆಟ್‌ಪತನ: 1-16, 2-78, 3-100, 4-101,5-140.

ಬೌಲಿಂಗ್‌:
ಡೇನಿಯಲ್‌ ಸ್ಯಾಮ್ಸ್‌ 4-0-44-0
ಆರ್‌. ಅಶ್ವಿ‌ನ್‌ 4-0-29-3
ಕಾಗಿಸೊ ರಬಾಡ 4-0-42-0
ಅಕ್ಷರ್‌ ಪಟೇಲ್‌ 3-0-27-0
ಅನ್ರಿಚ್‌ ನೋರ್ಜೆ 4-0-50-1
ಮಾರ್ಕಸ್‌ ಸ್ಟೋಯಿನಿಸ್‌ 1-0-5-1

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಕಾಕ್‌ ಬಿ ಬೌಲ್ಟ್ 0
ಶಿಖರ್‌ ಧವನ್‌ ಬಿ ಬುಮ್ರಾ 0
ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 0
ಶ್ರೇಯಸ್‌ ಅಯ್ಯರ್‌ ಸಿ ರೋಹಿತ್‌ ಬಿ ಬುಮ್ರಾ 12
ಮಾರ್ಕಸ್‌ ಸ್ಟೋಯಿನಿಸ್‌ ಬಿ ಬುಮ್ರಾ 65
ರಿಷಭ್‌ ಪಂತ್‌ ಸಿ ಸೂರ್ಯಕುಮಾರ್‌ ಬಿ ಕೃಣಾಲ್‌ 3
ಅಕ್ಷರ್‌ ಪಟೇಲ್‌ ಸಿ ಚಹರ್‌ ಬಿ ಪೊಲಾರ್ಡ್‌ 42
ಡೇನಿಯಲ್‌ ಸ್ಯಾಮ್ಸ್‌ ಸಿ ಕಾಕ್‌ ಬಿ ಬುಮ್ರಾ 0
ಕಾಗಿಸೊ ರಬಾಡ ಔಟಾಗದೆ 15
ಅನ್ರಿಚ್‌ ನೋರ್ಜೆ ಔಟಾಗದೆ 0

ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 143
ವಿಕೆಟ್‌ ಪತನ: 1-0-, 2-0, 3-0, 4-20, 5-41, 6-112, 7-112, 8-141.

ಬೌಲಿಂಗ್
ಟ್ರೆಂಟ್‌ ಬೌಲ್ಟ್ 2-1-9-2
ಜಸ್‌ಪ್ರೀತ್‌ ಬುಮ್ರಾ 4-1-14-4
ಕೃಣಾಲ್‌ ಪಾಂಡ್ಯ 4-0-22-1
ನಥನ್‌ ಕೋಲ್ಟರ್‌ ನೈಲ್‌ 4-0-27-0
ಕೈರನ್‌ ಪೊಲಾರ್ಡ್‌ 4-0-36-1
ರಾಹುಲ್‌ ಚಹರ್‌ 2-0-35-0

Advertisement

Udayavani is now on Telegram. Click here to join our channel and stay updated with the latest news.

Next