ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಕ್ಕಿ ನಲುಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಮುಂಬೈ ಇಂಡಿಯನ್ಸ್ ಗೆ 7 ವಿಕೆಟ್ ಗಳ ಅಮೋಘ ಜಯದ ನಗೆ ಬೀರಿದೆ.
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 197 ರನ್ ಗಳ ಗುರಿ ಮುಂದಿಟ್ಟಿತು. ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ , ರೋಹಿತ್ ಶರ್ಮ ಅವರ ಅಬ್ಬರದ ಬ್ಯಾಟಿಂಗ್ ನಿಂದ 15.3 ಓವರ್ ಗಳಲ್ಲೇ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಬೆಂಗಳೂರಿನ ಬೌಲಿಂಗ್ ಕಳಪೆ ಎನ್ನುವುದನ್ನು ಮತ್ತೆ ನಿರೂಪಿಸಿದಂತಾಯಿತು.
ಇಶಾನ್ ಕಿಶನ್ 69(34ಎಸೆತ) ಗಳಿಸಿ ಔಟಾದರೆ, ಸಾಥ್ ನೀಡಿದ ರೋಹಿತ್ 38(24ಎಸೆತ) ಗಳಿಸಿ ಔಟಾದರು. ಆ ಬಳಿಕ ಬಂದ ಸ್ಟಾರ್ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಹಳಿಗೆ ಮರಳಿ ತನ್ನ ವೈಭವ ತೋರಿದರು.19 ಎಸೆತಗಳಲ್ಲಿ 52 ರನ್ ಚಚ್ಚಿದರು. ನಾಯಕ ಹಾರ್ದಿಕ್ ಪಾಂಡ್ಯ6 ಎಸೆತಗಳಲ್ಲಿ 21 ರನ್ ಕೊಡುಗೆ ನೀಡಿದರು. ತಿಲಕ್ ವರ್ಮ ಔಟಾಗದೆ 16 ರನ್ ಗಳಿಸಿದರು. 5 ವಿಕೆಟ್ ಕಿತ್ತ ವೇಗಿ ಬುಮ್ರಾ ಪಂದ್ಯ ಶ್ರೇಷ್ಠ ಎನಿಸಿಕೊಂಡರು.
ಇದನ್ನೂ ಓದಿ: IPL; ಅಬ್ಬರಿಸಿದ ಕಾರ್ತಿಕ್: ಮುಂಬೈ ಗೆ 197 ರನ್ ಗುರಿ ನೀಡಿದ ಆರ್ ಸಿಬಿ
RCB ಆಡಿದ 6 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಸೋತು ಮುಂದಿನ ಹಾದಿ ಕಠಿಣ ಮಾಡಿಕೊಂಡಿದೆ. ಮುಂಬೈ 5 ಪಂದ್ಯಗಳಲ್ಲಿ 2 ನೇ ಜಯ ತನ್ನದಾಗಿಸಿಕೊಂಡಿತು.