Advertisement

IPL; ಅಬ್ಬರಿಸಿದ ಕಾರ್ತಿಕ್: ಮುಂಬೈ ಗೆ 197 ರನ್ ಗುರಿ ನೀಡಿದ ಆರ್ ಸಿಬಿ

09:31 PM Apr 11, 2024 | Team Udayavani |

ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಮುಂಬೈ ಇಂಡಿಯನ್ಸ್ ಗೆ ಗೆಲ್ಲಲು ರನ್ ಗಳ ಗುರಿ ಮುಂದಿಟ್ಟಿದೆ.

Advertisement

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿ 3(9ಎಸೆತ) ರನ್ ಗಳಿಸಿ ಔಟಾದರು. ಆ ಬಳಿಕ ವಿಲ್ ಜಾಕ್ಸ್ 8 ರನ್ ಗಳಿಸಿ ನಿರ್ಗಮಿಸಿದರು. ಆರಂಭಿಕ ಆಘಾತ ಅನುಭವಿಸಿತು. ಆಧಾರವಾದ ನಾಯಕ ಫಾಫ್ ಡು ಪ್ಲೆಸಿಸ್ 61 ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ರಜತ್ ಪಾಟಿದಾರ್ 50 ರನ್ ಗಳಿಸಿ ಔಟಾದರು. ಮತ್ತೆ ವಿಫಲರಾದ ಗ್ಲೆನ್ ಮ್ಯಾಕ್ಸ್ ವೆಲ್ ಖಾತೆ ತೆರೆಯುವ ಮುನ್ನವೇ llbw ಗೆ ಬಲಿಯಾದರು.

ಒಂದಾದ ಮೇಲೆ ಒಂದು ವಿಕೆಟ್ ಬಿದ್ದರೂ ಭರವಸೆ ಹುಸಿಯಾಗಿಸಿದ ದಿನೇಶ್ ಕಾರ್ತಿಕ್ ಕೊನೆಯಲ್ಲಿ ಅಬ್ಬರಿಸಿದರು. 23 ಎಸೆತಗಳಲ್ಲಿ 53 ರನ್ ಚಚ್ಚಿದರು. 5 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ಸೌರವ್ ಚೌಹಾಣ್ 9 ರನ್ ಗಳಿಸಿದರು.

ಮುಂಬೈ ಪರ ಬಿಗಿ ದಾಳಿ ನಡೆಸಿದ ಬುಮ್ರಾ 5 ವಿಕೆಟ್ ಕಿತ್ತು ಆರ್ ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next