ಮುಂಬೈ: ಶುಕ್ರವಾರ ವಾಂಖೆಡೆ ಸ್ಟೇಡಿಯಂಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 27 ರನ್ ಗಳಿಂದ ಸೋಲಿಸಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತು.
ವೃದ್ಧಿಮಾನ್ ಸಹಾ 2, ಶುಭಮನ್ ಗಿಲ್ 6, ಹಾರ್ದಿಕ್ ಪಾಂಡ್ಯ 4 ರನ್ ಗಳಿಗೆ ಪೆವಿಲಿಯನ್ ಗೆ ಮರಳಿ ದಯನೀಯ ವೈಫಲ್ಯ ಅನುಭವಿಸಿದರು.
ವಿಜಯ್ ಶಂಕರ್ 29 , ಡೇವಿಡ್ ಮಿಲ್ಲರ್ 41, ರಾಹುಲ್ ತೆವಾಟಿಯಾ 14, ಕೊನೆಯಲ್ಲಿ ಅಬ್ಬರಿಸಿದ ರಶೀದ್ ಖಾನ್ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ತೋರಿದ ಅವರು 32 ಎಸೆತಗಳಲ್ಲಿ 79 ರನ್ ಚಚ್ಚಿದರು. ಬರೋಬ್ಬರಿ 10 ಆಕರ್ಷಕ ಸಿಕ್ಸರ್ ಗಳನ್ನು ಸಿಡಿಸಿದರು.ಔಟಾಗದೆ 79 ರನ್ ಗಳಿಸಿ ಸಾಮರ್ಥ್ಯ ತೋರಿದರು.
Related Articles
ಯಾದವ್ ಭರ್ಜರಿ ಚೊಚ್ಚಲ ಶತಕ
ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಭರ್ಜರಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಭರ್ಜರಿ ಆಟವಾಡಿದ ಸೂರ್ಯಕುಮಾರ್ ಯಾದವ್ ಔಟಾಗದೆ 103 ರನ್ ಗಳಿಸಿದರು. 49 ಎಸೆತಗಳಲ್ಲಿ ಶತಕ ಸಿಡಿಸಿದರು. 11 ಬೌಂಡರಿ ಮತ್ತು 6 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಅಲ್ಜಾರಿ ಜೋಸೆಫ್ ಎಸೆದ ಕೊನೆಯ (19.6 ) ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಸಿಕ್ಸರ್ ಬಾರಿಸಿ ಶತಕ ಪೂರ್ಣ ಗೊಳಿಸಿದರು.
ಇಶಾನ್ ಕಿಶನ್ 31, ನಾಯಕ ರೋಹಿತ್ ಶರ್ಮಾ 29 ರನ್ ಗಳಿಸಿ ಔಟಾದರು.ಮುಂಬೈ ಐಪಿಎಲ್ ಋತುವಿನಲ್ಲಿ ಐದು 200-ಪ್ಲಸ್ ಮೊತ್ತವನ್ನು ನೋಂದಾಯಿಸಿದ ಮೊದಲ ತಂಡವಾಗಿದೆ.
ನೆಹಾಲ್ ವಧೇರಾ 15, ವಿಷ್ಣು ವಿನೋದ್ 30 ರನ್ ಗಳ ಸಾಥ್ ನೀಡಿದರು. ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ 4 ವಿಕೆಟ್ ಪಡೆದು ಗಮನ ಸೆಳೆದರು.