Advertisement

IPL: 250 ಪಂದ್ಯಗಳ ದಾಖಲೆ ಬರೆದ ಮುಂಬೈ ಇಂಡಿಯನ್ಸ್‌

07:53 PM Apr 02, 2024 | Team Udayavani |

ಮುಂಬೈ: ಮುಂಬೈ ಇಂಡಿಯನ್ಸ್‌ ಸೋಮವಾರ ರಾತ್ರಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ತವರಲ್ಲೇ ಮುಗ್ಗರಿಸಿ ಹ್ಯಾಟ್ರಿಕ್‌ ಸೋಲನ್ನು ಹೊತ್ತುಕೊಂಡಿರಬಹುದು, ಆದರೆ ಈ ನಡುವೆಯೂ ಅದು ದಾಖಲೆಯೊಂದನ್ನು ಸ್ಥಾಪಿಸಿದೆ. ಇದು ಮುಂಬೈ ಆಡಿದ 250ನೇ ಪಂದ್ಯವಾಗಿದ್ದು, ಈ ಮೈಲುಗಲ್ಲು ನೆಟ್ಟ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

138 ಪಂದ್ಯಗಳನ್ನು ಗೆದ್ದಿರುವ ಮುಂಬೈ, 108 ಪಂದ್ಯಗಳಲ್ಲಿ ಸೋಲನುಭವಿಸಿದೆ. ಉಳಿದ 4 ಪಂದ್ಯಗಳು ರದ್ದುಗೊಂಡಿವೆ. 5 ಸಲ ಚಾಂಪಿಯನ್‌ ಎನಿಸಿದ್ದು ಮುಂಬೈ ಪಾಲಿನ ಹೆಗ್ಗಳಿಕೆ.

ಐಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ 2ನೇ ತಂಡವೆಂದರೆ ಆರ್‌ಸಿಬಿ. ಮಂಗಳವಾರದ ಲಕ್ನೋ ಎದುರಿನ ಮುಖಾಮುಖೀ ಆರ್‌ಸಿಬಿಯ 245ನೇ ಪಂದ್ಯವಾಗಿದೆ. ಪ್ರಸಕ್ತ ಋತುವಿನಲ್ಲೇ ಅದು 250 ಪಂದ್ಯಗಳ ಗಡಿ ದಾಟಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತೃತೀಯ ಸ್ಥಾನದಲ್ಲಿದ್ದು, ಬುಧವಾರ ಕೆಕೆಆರ್‌ ವಿರುದ್ಧ ತನ್ನ 242ನೇ ಪಂದ್ಯವಾಡಲಿದೆ. ಕೆಕೆಆರ್‌ಗೆ 5ನೇ ಸ್ಥಾನ. ಅದು ಈವರೆಗೆ 239 ಪಂದ್ಯಗಳನ್ನಾಡಿದೆ. 235 ಪಂದ್ಯಗಳನ್ನಾಡಿರುವ ಪಂಜಾಬ್‌ ಕಿಂಗ್ಸ್‌ಗೆ 4ನೇ ಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next