Advertisement

IPL 2023: ಮುಂಬೈ ಇಂಡಿಯನ್ಸ್‌-ಡೆಲ್ಲಿ ಕ್ಯಾಪಿಟಲ್ಸ್‌: ಮೊದಲ ಗೆಲುವಿಗೆ ಕಾತರ

11:42 PM Apr 10, 2023 | Team Udayavani |

ನವದೆಹಲಿ: ಹ್ಯಾಟ್ರಿಕ್‌ ಸೋಲನ್ನು ಹೊತ್ತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಸತತ ಎರಡು ಸೋಲಿನೊಂದಿಗೆ ಡೆಲ್ಲಿಗಿಂತ ಒಂದು ಸ್ಥಾನ ಮೇಲಿರುವ ಮುಂಬೈ ಇಂಡಿಯನ್ಸ್‌ ಮಂಗಳವಾರ ಮಹತ್ವದ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ.

Advertisement

ಎರಡರಲ್ಲೊಂದು ತಂಡ ಗೆಲುವಿನ ಖಾತೆ ತೆರೆಯುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಿದೆ.

ಮುಂಬೈ ಇಂಡಿಯನ್ಸ್‌ ಸೋಲಿನಿಂದ ಮುಕ್ತಿ ಪಡೆಯಬಹುದೇ, ಡೆಲ್ಲಿ ತನ್ನ ಮೇಲಿನ ಹ್ಯಾಟ್ರಿಕ್‌ ಸೋಲಿನ ಹೊರೆಯನ್ನು ರೋಹಿತ್‌ ಪಡೆಗೆ ವರ್ಗಾಯಿಸಬಹುದೇ ಎಂಬುದೆಲ್ಲ ಮಂಗಳವಾರದ ರಾತ್ರಿಯ ನಿರೀಕ್ಷೆಗಳು.

ಮುಂಬೈ ಇಂಡಿಯನ್ಸ್‌ ತನ್ನ ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ 8 ವಿಕೆಟ್‌ಗಳಿಂದ, ಬಳಿಕ ತವರಿನ ವಾಂಖೇಡೆ ಆಂಗಳದಲ್ಲೇ ಚೆನ್ನೈಗೆ 7 ವಿಕೆಟ್‌ಗಳಿಂದ ಶರಣಾಗಿತ್ತು. ಡೆಲ್ಲಿಯದು ಇದಕ್ಕೂ ಘೋರ ಕತೆ. ಲಕ್ನೋ ವಿರುದ್ಧ 50 ರನ್ನಿನಿಂದ, ಗುಜರಾತ್‌ ವಿರುದ್ಧ 6 ವಿಕೆಟ್‌ಗಳಿಂದ ಹಾಗೂ ರಾಜಸ್ಥಾನ್‌ ಕೈಯಲ್ಲಿ 57 ರನ್ನುಗಳ ಆಘಾತಕ್ಕೆ ಸಿಲುಕಿತ್ತು. ಗುಜರಾತ್‌ ಎದುರಿನ ಸೋಲು ತವರಿನ ಕೋಟ್ಲಾ ಅಂಗಳದಲ್ಲೇ ಎದುರಾಗಿತ್ತು. ಅರ್ಥಾತ್‌, ಇತ್ತಂಡಗಳಿಗೂ ತವರಿನಂಗಳ ಶಾಪವಾಗಿ ಕಾಡಿದ್ದನ್ನು ಮರೆಯುವಂತಿಲ್ಲ.

ಅಗ್ರ ಕ್ರಮಾಂಕದ ವೈಫ‌ಲ್ಯ:
ಎರಡೂ ತಂಡಗಳ ಟಾಪ್‌ ಆರ್ಡರ್‌ ವೈಫ‌ಲ್ಯದಿಂದ ಬಳಲುತ್ತಿವೆ. ಮುಂಬೈಗೆ ನಾಯಕ ರೋಹಿತ್‌ ಶರ್ಮ-ಇಶಾನ್‌ ಕಿಶನ್‌ ಜೋಡಿಯಿಂದ ಇನ್ನೂ ಭದ್ರ ಬುನಾದಿ ಲಭಿಸಿಲ್ಲ. “ಮಿಲಿಯನ್‌ ಡಾಲರ್‌ ಬೈ’ ಖ್ಯಾತಿಯ ಕ್ಯಾಮರಾನ್‌ ಗ್ರೀನ್‌ ಕೂಡ ಪರಿಣಾಮ ಬೀರಿಲ್ಲ. ಸೂರ್ಯಕುಮಾರ್‌ ಯಾದವ್‌ ಅವರಿಗೀಗ ಟಿ20ಯಲ್ಲೂ ರನ್‌ ಬರಗಾಲ ಎದುರಾದಂತಿದೆ.

Advertisement

ತಿಲಕ್‌ ವರ್ಮ ಮಾತ್ರವೇ ಹೋರಾಟವೊಂದನ್ನು ಸಂಘಟಿಸುತ್ತಿದ್ದಾರೆ. ಆರ್‌ಸಿಬಿ ವಿರುದ್ಧ ಅಜೇಯ 84 ರನ್‌ ಹಾಗೂ ಚೆನ್ನೈ ವಿರುದ್ಧ 22 ರನ್‌ ಹೊಡೆದಿದ್ದಾರೆ. ಚೆನ್ನೈ ಎದುರು ಟಿಮ್‌ ಡೇವಿಡ್‌ ಭರವಸೆಯೊಂದನ್ನು ಚಿಗುರಿಸಿದ್ದರು. ಒಟ್ಟಾರೆ ಹೇಳುವುದಾದರೆ ಚಾಂಪಿಯನ್ನರ ಆಟದಿಂದ ಮುಂಬೈ ಬಹಳ ದೂರವೇ ಇದೆ.

ಬೌಲಿಂಗ್‌ ಕೂಡ ಪರಿಣಾಮಕಾರಿಯಾಗಿಲ್ಲ. ಆರ್‌ಸಿಬಿ ವಿರುದ್ಧ ಕೆಡವಲು ಸಾಧ್ಯವಾದದ್ದು ಎರಡೇ ವಿಕೆಟ್‌. ಚೆನ್ನೈ ಎದುರು ಒಂದು ಹೆಚ್ಚು ವಿಕೆಟ್‌ ಉರುಳಿಸಿತು. ಆರ್‌ಸಿಬಿ 16.2 ಓವರ್‌ಗಳಲ್ಲಿ, ಚೆನ್ನೈ 18.1 ಓವರ್‌ಗಳಲ್ಲಿ ಮುಂಬೈಯನ್ನು ಮಣಿಸಿತ್ತು. ಅದರಲ್ಲೂ ಮುಂಬಯಿಯವರೇ ಆದ, ಮೊದಲ ಸಲ ಚೆನ್ನೈ ಪರ ಆಡಲಿಳಿದ ಅಜಿಂಕ್ಯ ರಹಾನೆ ವಾಂಖೇಡೆ ಅಂಗಳದಲ್ಲಿ ತೋರ್ಪಡಿಸಿದ ಬ್ಯಾಟಿಂಗ್‌ ಪ್ರತಾಪದಿಂದ ಮುಂಬೈ ತೀವ್ರ ಮುಖಭಂಗ ಅನುಭವಿಸಿದ್ದನ್ನು ಮರೆಯಲಾಗದು.

ಆರ್ಚರ್‌, ಜೇಸನ್‌ ಬೆಹ್ರಂಡಾಫ್, ಅರ್ಷದ್‌ ಖಾನ್‌, ಕ್ಯಾಮರಾನ್‌ ಗ್ರೀನ್‌, ಪೀಯೂಷ್‌ ಚಾವ್ಲಾ, ಕುಮಾರ ಕಾರ್ತಿಕೇಯ, ಹೃತಿಕ್‌ ಶೊಕೀನ್‌ ಅವರನ್ನೊಳಗೊಂಡ ಮುಂಬೈ ಬೌಲಿಂಗ್‌ ಯಾವುದೇ ಪರಿಣಾಮ ಬೀರಿಲ್ಲ. ಬಹು ನಿರೀಕ್ಷೆಯ ಆರ್ಚರ್‌ ಆರ್‌ಸಿಬಿ ವಿರುದ್ಧ ವಿಕೆಟ್‌ಲೆಸ್‌ ಎನಿಸಿದ್ದರು. ಚೆನ್ನೈ ವಿರುದ್ಧ ತಂಡದಿಂದಲೇ ಹೊರಗುಳಿದರು! ಸೀನಿಯರ್ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ ಎಂಬುದಾಗಿ ರೋಹಿತ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಡೆಲ್ಲಿ ಸಮಸ್ಯೆ ಹಲವು:
ಡೆಲ್ಲಿಯ ಸಮಸ್ಯೆಯೂ ಟಾಪ್‌ ಆರ್ಡರ್‌ನಿಂದಲೇ ಆರಂಭವಾಗುತ್ತದೆ. ಇಲ್ಲಿ ಆಡುವುದು ನಾಯಕ ಡೇವಿಡ್‌ ವಾರ್ನರ್‌ ಮಾತ್ರ. ಕ್ರಮವಾಗಿ 56, 37 ಮತ್ತು 65 ರನ್‌ ಬಾರಿಸಿದ್ದಾರೆ. ಪೃಥ್ವಿ ಶಾ ಪರದಾಟ ಹೇಳತೀರದು(12, 7 ಮತ್ತು 0). ಪ್ರಚಂಡ ಫಾರ್ಮ್ನಲ್ಲಿದ್ದ ಮಿಚೆಲ್‌ ಮಾರ್ಷ್‌ ಡೆಲ್ಲಿ ತಂಡಕ್ಕೆ ಕಾಲಿಟ್ಟಾಗಿನಿಂದ ಬ್ಯಾಟಿಂಗೇ ಮರೆತಿದ್ದಾರೆ(0, 4). ಈಗ ಮದುವೆ ಮಾಡಿಕೊಳ್ಳಲು ತವರಿಗೆ ಹಾರಿದ್ದಾರೆ. ಅಕ್ಷರ್‌ ಪಟೇಲ್‌ ಅವರದೂ ಮಿಶ್ರಫ‌ಲ.

ಹಾಗೆಯೇ ದೇಶಿ ಕ್ರಿಕೆಟ್‌ ಹೀರೋ ಸಫ‌ìರಾಜ್‌ ಖಾನ್‌ ಮತ್ತು ರಿಲೀ ರೋಸ್ಯೂ ಅವರ ಬರಗಾಲ ಕೂಡ ಡೆಲ್ಲಿಯ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದೆ. ರೋವ¾ನ್‌ ಪೊವೆಲ್‌ ಪವರ್‌ ಹಿಟ್ಟರ್‌ ಎನಿಸಿಲ್ಲ. ಮನೀಷ್‌ ಪಾಂಡೆ ಮೊದಲ ಅವಕಾಶದಲ್ಲೇ ಸೊನ್ನೆ ಸುತ್ತಿ ಹೋಗಿದ್ದಾರೆ. ಒಟ್ಟಾರೆಯಾಗಿ ಬ್ಯಾಟಿಂಗ್‌ ಸುಧಾರಣೆಯಾಗದೆ ಡೆಲ್ಲಿಗೆ ಉಳಿಗಾಲವಿಲ್ಲ.

ಡೆಲ್ಲಿ ಬೌಲಿಂಗ್‌ನದ್ದು ಇನ್ನೊಂದು ಗೋಳು. 3 ಪಂದ್ಯಗಳಲ್ಲಿ ಕೆಡವಿದ್ದು 14 ವಿಕೆಟ್‌ ಮಾತ್ರ. ನೋರ್ಜೆ, ಕುಲದೀಪ್‌, ಮುಕೇಶ್‌, ಖಲೀಲ್‌ ಅಹ್ಮದ್‌, ಸಕಾರಿಯಾ ಅವರೆಲ್ಲ ಶಿಸ್ತುಬದ್ಧ ದಾಳಿ ಸಂಘಟಿಸನೇಕಾದ ತುರ್ತು ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next