ಮುಂಬಯಿ, ಜೂ. 10: ಮಾನ್ಸೂನ್ ಪ್ರಾರಂಭದ ಮೊದಲೇ ನಗರದಲ್ಲಿ ಕೋವಿಡ್ -19 ಸಾವಿನಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಜೂನ್ ಮೊದಲ ಒಂಬತ್ತು ದಿನಗಳಲ್ಲಿ ಪ್ರತಿದಿನ ಸರಾಸರಿ 53 ಸಾವುಗಳು ಸಂಭವಿಸುತ್ತಿರುವುದು ಆತಂಕದ ವಿಷಯವಾಗಿದೆ.
ಮೇ ಕೊನೆಯ ಒಂಬತ್ತು ದಿನಗಳಲ್ಲಿ ಸರಾಸರಿ ಸಾವಿನ ಸಂಖ್ಯೆ 41 ಆಗಿತ್ತು. ಆದ್ದರಿಂದ ಹಿಂದಿನ ತಿಂಗಳ ಕೊನೆಯ ಒಂಬತ್ತು ದಿನಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಸಾವಿನ ಪ್ರಮಾಣದಲ್ಲಿ ಶೇ. 4 ರಷ್ಟು ಏರಿಕೆಯಾಗಿದ್ದು, ಹತ್ತು ದಿನಗಳಲ್ಲಿ ಮುಂಬಯಿಯಲ್ಲಿ 481 ಮಂದಿ ಸಾವನ್ನಪ್ಪಿದ್ದಾರೆ.
ಕೋವಿಡ್ ವೈರಸ್ ಪ್ರಾರಂಭವಾದಾಗಿನಿಂದ ಒಟ್ಟಾರೆ ಕೋವಿಡ್ ಸಾವಿನ ಪ್ರಮಾಣವು ಶೇ. 27 ರಷ್ಟಿದ್ದು, ಜೂ. 1 ರಂದು 40 ಮಂದಿ, ಜೂ. 5 ಮತ್ತು 6 ರಂದು ಕ್ರಮವಾಗಿ 54 ಮತ್ತು 58 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮುಂಬಯಿಯಲ್ಲಿ ಮಂಗಳವಾರ 58 ಜನ ಸಾವನ್ನಪ್ಪಿದ್ದರೆ, ರವಿವಾರ ಮತ್ತು ಸೋಮವಾರ ಕ್ರಮವಾಗಿ 61 ಮತ್ತು 64 ಸಾವುಗಳು ಸಂಭವಿಸಿವೆ.
ಸೋಮವಾರ ನಡೆದ 64 ಸಾವುಗಳು ಒಂದು ದಿನದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದ್ದು, ಸರಾಸರಿ ಸಾವಿನ ಪ್ರಮಾಣವು 3.44 ರಷ್ಟಿದೆ. ಮೇ ತಿಂಗಳಲ್ಲಿ ಸರಾಸರಿ ದೈನಂದಿನ ಸಾವು ಗಳು 32 ರಷ್ಟಿತ್ತು. ರಾಜ್ಯ ದೈನಂದಿನ ಪಾಸಿಟಿವ್ ಪ್ರಕರಣಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಯಿಲ್ಲದಿದ್ದರೂ ನಗರದಲ್ಲಿ ಸಾವು-ನೋವುಗಳು ಹೆಚ್ಚಾಗುತ್ತವೆ. ಜೂನ್ ಮೊದಲ 9 ದಿನಗಳಲ್ಲಿ ಸರಾಸರಿ 53 ಸಾವುಗಳು ಸಂಭವಿಸಿವೆ. ಪ್ರತಿದಿನ ಧನಾತ್ಮಕವಾಗಿ ಬರುವ ಜನರ ಸಂಖ್ಯೆ ಸುಮಾರು 1,300 ರಷ್ಟಿದೆ. ಮಾನ್ಸೂನ್ ಮೊದಲೇ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಆತಂಕಕಾರಿ ವಿಷಯವಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯದ ಸದಸ್ಯ ಡಾ| ಶಶಾಂಕ್ ಜೋಶಿ ಹೇಳಿದರು.