ಮುಂಬಯಿ: ಕೆಲ ದಿನಗಳ ಹಿಂದೆ ಮಹಿಳಾ ವೈದ್ಯೆಯೊಬ್ಬರು ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮುಂಬಯಿ ಪೊಲೀಸರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಐಸ್ ಕ್ರೀಮ್ ನಲ್ಲಿ ಪತ್ತೆಯಾಗಿರುವ ಬೆರಳು ಪುಣೆಯ ಫ್ಯಾಕ್ಟರಿಯಲ್ಲಿ ಕೆಲಸಮಾಡುತ್ತಿರುವ ಸಿಬ್ಬಂದಿಯದ್ದು ಆಗಿರಬಹುದು ಎಂದು ಹೇಳಿದ್ದಾರೆ, ಇದಕ್ಕೆ ಕಾರಣ ಕೆಲ ದಿನಗಳ ಹಿಂದೆ ಐಸ್ ಕ್ರೀಮ್ ಫ್ಯಾಕ್ಟಾರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಬೆರಳಿಗೆ ಗಾಯಮಾಡಿಕೊಂಡು ಬೆರಳಿನ ಸಣ್ಣ ಭಾಗ ಕಳೆದುಕೊಂಡಿದ್ದ ಎನ್ನಲಾಗಿದೆ.
ಹಾಗಾಗಿ ಪೊಲೀಸರು ಐಸ್ ಕ್ರೀಮ್ ನಲ್ಲಿ ಪತ್ತೆಯಾಗಿರುವ ಬೆರಳು ಇದೇ ಸಿಬ್ಬಂದಿಯದ್ದು ಆಗಿರಬಹುದು ಎಂದು ಹೇಳಿದ್ದು ಸದ್ಯ ಬಾಲಕನ ಹಾಗೂ ಪತ್ತೆಯಾದ ಬೆರಳಿನ ಡಿಎನ್ ಎ ಪರೀಕ್ಷೆ ನಡೆಸಬೇಕಾಗಿದೆ ಇದಾದ ಬಳಿಕ ಸ್ಪಷ್ಟ ಚಿತ್ರಣ ಹೊರಬರಲಿದೆ ಎಂದಿದ್ದಾರೆ.
ಇತ್ತೀಚಿಗೆ ಮುಂಬಯಿ ಮೂಲದ ಮಹಿಳಾ ವೈದ್ಯೆಯೊಬ್ಬರು ಆನ್ ಲೈನ್ ಮೂಲಕ ಮೂರೂ ಕೋನ್ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು ಈ ವೇಳೆ ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು ಇದರಿಂದ ಗಾಬರಿಗೊಂಡ ವೈದ್ಯೆ ಪೊಲೀಸ್ ಠಾಣೆಯಲ್ಲಿ ಐಸ್ ಕ್ರೀಮ್ ಕಂಪೆನಿ ವಿರುದ್ಧ ದೂರು ನೀಡಿದ್ದಾರೆ, ಇದಾದ ಬಳಿಕ ಐಸ್ ಕ್ರೀಮ್ ನಲ್ಲಿ ಬೆರಳು ಪತ್ತೆಯಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಇದರ ಬೆನ್ನಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಐಸ್ ಕ್ರೀಮ್ ಕಾರ್ಖಾನೆಯಲ್ಲಿ ತಪಾಸಣೆ ನಡೆಸಿ ಬಳಿಕ ಕಂಪನಿಯ ಪರವಾನಗಿಯನ್ನು ಅಮಾನತುಗೊಳಿಸಿತ್ತು.
ಇದೀಗ ಪೊಲೀಸರು ತನಿಖೆ ನಡೆಸಿದ ವೇಳೆ ಪುಣೆಯಲ್ಲಿರುವ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಬೆರಳು ಇದ್ದಿರಬಹುದು ಎಂದು ಹೇಳಿದ್ದಾರೆ ಸದ್ಯ ಡಿಎನ್ ಎ ಪರೀಕ್ಷೆ ನಡೆದಿದ್ದು ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಹೊರ ಬರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Yoga Day 2024: ದಾಲ್ ಸರೋವರ ಬಳಿ ಪ್ರಧಾನಿ ಮೋದಿ ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ