ಮುಂಬಯಿ: ಮಹಾನಗ ರದಲ್ಲಿ ಕಳೆದ ಎರಡು ದಶಕಗಳಿಂದ ಸಮಾಜಿಕ, ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಲ್ಲಿ ಗುರುತರ ಸೇವೆಗಳ ಮುಖೇನ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಮುದಾಯದ ಸರ್ವೋನ್ನತಿಗಾಗಿ ಶ್ರಮಿಸುತ್ತಿರುವ ಗಾಣಿಗ ಸಮಾಜ ಮುಂಬಯಿ ಇದರ 21 ನೇ ವಾರ್ಷಿಕೋತ್ಸÕವ ಸಮಾರಂ ಭವು ನ. 11 ರಂದು ನಡೆಯಿತು.
ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಸಭಾಗೃಹದಲ್ಲಿ ಸಂಸ್ಥೆಯ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ಅಧ್ಯಕ್ಷತೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಿನಪೂರ್ತಿ ಜರಗಿತು. ಸೋಮಕ್ಷತ್ರೀಯ ಗಾಣಿಗ ಸಮಾಜ ಉಡುಪಿ ಜಿಲ್ಲೆ ಅಧ್ಯಕ್ಷ ಕೆ. ಗೋಪಾಲ್ ಮತ್ತು ವಸಂತಿ ಗೋಪಾಲ್ ದಂಪತಿ ಬೆಳಗ್ಗೆ ದೀಪ ಬೆಳಗಿಸಿ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆದ ಸಮಾರಂಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಉಪಾಧ್ಯಕ್ಷರುಗಳಾದ ಬಿ. ವಿ. ರಾವ್ ಮತ್ತು ಭಾಸ್ಕರ ಎಂ. ಗಾಣಿಗ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಕೋಶಾಧಿಕಾರಿ ಜಯಂತ್ ಪಿ. ಗಾಣಿಗ, ಜೊತೆ ಕಾರ್ಯದರ್ಶಿ ಬಿ. ಜಗದೀಶ್ ಗಾಣಿಗ, ವಿದ್ಯೋದ ಯ ಸಮಿತಿಯ ಕಾರ್ಯಾ ಧಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್. ಭಟ್ಕಳ್, ಯುವ ವಿಭಾಗದ ಕಾರ್ಯಾ ಧ್ಯಕ್ಷ ಗಣೇಶ್ ಆರ್.ಕುತ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಉಪ ಶಿಕ್ಷಣಾಧಿಕಾರಿ ಮಮತಾ ಡಿ. ರಾವ್ ಮತ್ತು ಸಂಪರ್ಕ ಸುಧಾ ಮಾಸಿಕದ ಮಾಜಿ ಸಂಪಾದಕ ರಘುರಾಮ ಬೈಕಾಡಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಗಾಣಿಗ ಸಮಾಜದ ವಿದ್ಯೋದಯ ಸಮಿತಿಯ ವತಿಯಿಂದ ವಾರ್ಷಿಕ ವಾಗಿ ಪ್ರದಾನಿಸಲಾಗುವ ಶೈಕ್ಷಣಿಕ ಪುರಸ್ಕಾರ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಗಾಣಿಗ ಸಮಾಜದ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು. ನೂರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್