ನವದೆಹಲಿ: ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ಮುಂಬಯಿಯಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ತೊಡಕಾಗಿದೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಇದ್ದೂ, ನಾಗರಿಕರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಪಶ್ಚಿಮ ಉಪನಗರಗಳಲ್ಲಿ ಸುಮಾರು 150 ಮಿಮೀ -200 ಮಿ.ಮೀ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ರಸ್ತೆಯಲ್ಲೆಲ್ಲಾ ನೀರು ತುಂಬಿಕೊಂಡಿದ್ದು, ಕೆಲಸದ ಸ್ಥಳಗಳಿಗೆ ಉದ್ಯೋಗಿಗಳಿಗೆ ತಲುಪಲು ಹೆಣಗಾಡುತ್ತಿದ್ದಾರೆ. ಮಧ್ಯರಾತ್ರಿಯ ಹೊತ್ತಿಗೆ ಮಳೆಯ ತೀವ್ರತೆಯು ಕಡಿಮೆಯಾಗಿದ್ದರೂ ಮುಂಜಾನೆ 3.30 ರಿಂದ ಗುಡುಗು ಸಹಿತ ಮಳೆಯಾಗುತ್ತಿದೆ.
ಪ್ರವಾಹ ಪರಿಸ್ಥಿತಿಯಿಂದಾಗಿ ಕೇಂದ್ರ ಮತ್ತು ಬಂದರು ಮಾರ್ಗಗಳಲ್ಲಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಂಬೈನ ನಾಗರಿಕ ಸಂಸ್ಥೆ – ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಇಂದು ಬೆಳಿಗ್ಗೆ ಟ್ವೀಟ್ ಮಾಡಿದೆ. ಆದಾಗ್ಯೂ, ಪಶ್ಚಿಮ ರೈಲ್ವೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
Related Articles
ಪ್ರಾದೇಶಿಕ ಹವಾಮಾನ ಇಲಾಖೆ, ತಗ್ಗು ಸ್ಥಳಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸಬೇಕು. ಸಂಚಾರ ಅಡೆತಡೆಗಳು ಮಾತ್ರವಲ್ಲದೆ ವಿದ್ಯುತ್ ಕಡಿತವುಂಟಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.
26 ವರ್ಷಗಳ ಬಳಿಕ ಎರಡನೇ ಬಾರಿಗೆ 24 ಗಂಟೆಗಳಲ್ಲಿ ಅತ್ಯಧಿಕ ಮಳೆಯಾಗಿದೆ. ಸೆಪ್ಟೆಂಬರ್ 20, 2016 ರಂದು ಮುಂಬೈನಲ್ಲಿ 303.7 ಮಿ.ಮೀ ಮಳೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಇದಕ್ಕೂ ಮೊದಲು, ಸೆಪ್ಟೆಂಬರ್ 23, 1993 ರಂದು 312.4 ಮಿಮೀ ಮಳೆ ಮತ್ತು ಸೆಪ್ಟೆಂಬರ್ 23, 1981 ರಂದು 318.2 ಮಿಮೀ ಮಳೆಯಾಗಿದೆ.