Advertisement

ಮುಂಬೈನ ಟೆಲಿಫೋನ್ ಎಕ್ಸ್ ಚೇಂಜ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ

09:02 AM Jul 23, 2019 | Team Udayavani |

ಮುಂಬೈ:ಮುಂಬೈನ ಬಾಂದ್ರಾದಲ್ಲಿರುವ ಮಹಾನಗರ್ ಟೆಲಿಫೋನ್ ನಿಗಮ ಲಿಮಿಟೆಡ್(ಎಂಟಿಎನ್ ಎಲ್)ನ ಬಹುಮಹಡಿ ಕಟ್ಟದಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ಬಾಂದ್ರಾದ ಟೆಲಿಫೋನ್ ಎಕ್ಸ್ ಚೇಂಜ್ ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದು, ಘಟನಾ ಸ್ಥಳಕ್ಕೆ 14 ಅಗ್ನಿಶಾಮಕ ದಳ ದೌಡಾಯಿಸಿದೆ ಎಂದು ವರದಿ ತಿಳಿಸಿದೆ.

ಪ್ರಾಥಮಿಕ ವರದಿ ಪ್ರಕಾರ, ಅಗ್ನಿ ಅವಘಡದಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಎಎನ್ ಐ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next