Advertisement

ಮುಂಬಯಿ: ಲಾಲ್ಮತಿ ಕೊಳೆಗೇರಿಯಲ್ಲಿ ಬೆಂಕಿ, ಆಗಸದೆತ್ತರ ಕಪ್ಪು ಹೊಗೆ

04:27 PM Oct 30, 2018 | udayavani editorial |

ಮುಂಬಯಿ : ನಗರದಾಸ್‌ ರಸ್ತೆಯಲ್ಲಿನ ಬಾಂದ್ರಾ ಫೈರ್‌ ಸ್ಟೇಶನ್‌ ಎದುರುಗಡೆ ಇರುವ ಲಾಲ್ಮತಿ ಕೊಳೆಗೇರಿಯಲ್ಲಿ ಇಂದು ಮಂಗಳವಾರ ಮೂರನೇ ಮಟ್ಟದ ತೀವ್ರತೆಯ ಅಗ್ನಿ ಆಕಸ್ಮಿಕ ಸಂಭವಿಸಿದ್ದು ಸುಮಾರು 8 ವಾಟರ್‌ ಟ್ಯಾಂಕುಗಳು ಮತ್ತು 9 ಅಗ್ನಿ ಶಾಮಕಗಳು ಬೆಂಕಿ ನಂದಿಸುವ ಕೆಲಸದಲ್ಲಿ ನಿರತವಾಗಿವೆ. ರಕ್ಷಣಾ ಕಾರ್ಯಾಚರಣೆಯೂ ಭರದಿಂದ ಸಾಗಿದೆ. 

Advertisement

ಬೆಳಗ್ಗೆ ಸುಮಾರು 11.30ರ ಹೊತ್ತಿಗೆ ನರ್ಗಿಸ್‌ ದತ್‌ ನಗರದ ಹಿಂಭಾದಲ್ಲಿರುವ ಕೊಳೆಗೇರಿಯಲ್ಲಿ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡವು. 

ಬೆಂಕಿ ದುರಂತದಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ವರದಿಗಳು ಈ ತನಕ ಬಂದಿಲ್ಲ.  ಬೆಂಕಿ ಎದ್ದ ತಾಣದಲ್ಲಿ ದಟ್ಟನೆಯ ಕಪ್ಪು ಹೊಗೆ ಆಗಸದೆತ್ತರ ಏರುವುದು ಕಂಡು ಬರುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next