Advertisement

ಮುಂಬೈ: ಗೋರೆಗಾಂವ್ ಸ್ಟುಡಿಯೋದಲ್ಲಿ ಅಗ್ನಿ ಅವಘಡ; ಸಾವು, ನೋವು ಸಂಭವಿಸಿಲ್ಲ

06:31 PM Feb 02, 2021 | Team Udayavani |

ಮುಂಬೈ: ಇಲ್ಲಿನ ಗೋರೆಗಾಂವ್ ಪಶ್ಚಿಮದಲ್ಲಿರುವ ಸ್ಟುಡಿಯೋದಲ್ಲಿ ಮಂಗಳವಾರ(ಫೆ.1, 2021) ಅಗ್ನಿ ಅನಾಹುತ ಸಂಭವಿಸಿದ್ದು, ಈ ಸ್ಟುಡಿಯೋ ನಗರದ ಇನೋರ್ಬಿಟ್ ಮಾಲ್ ಬಳಿ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಘಟನಾ ಸ್ಥಳಕ್ಕೆ ಎಂಟು ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಟುಡಿಯೋದಲ್ಲಿ ಬೆಂಕಿ ಅವಘಡ ಸಂಭವಿಸಿದ ವೇಳೆ ಯಾರೂ ಒಳಗೆ ಇಲ್ಲದಿದ್ದ ಕಾರಣ ಯಾವುದೇ ಸಾವು, ನೋವು ಸಂಭವಿಸಿಲ್ಲ.  ಪ್ರಾಥಮಿಕ ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿರುವುದಾಗಿ ತಿಳಿಸಿದೆ.

ಗೋರೆಗಾಂವ್ ಸಿನಿಮಾ ಸ್ಟುಡಿಯೋಗಳ ಹಬ್ ಆಗಿದೆ. ಪೂರ್ವ ಗೋರೆಗಾಂವ್ ಪ್ರಸಿದ್ಧ ಫಿಲ್ಮ್ ಸಿಟಿಯಾಗಿದೆ. ಕಳೆದ ವಾರ ಮಹಾರಾಷ್ಟ್ರದ ಭಿವಾಂಡಿಯ ಎಂಐಡಿಸಿ ಪ್ರದೇಶದಲ್ಲಿನ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.

ಮಹಾರಾಷ್ಟ್ರದ ಬಾಂದ್ರಾದಲ್ಲಿನ ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಜನವರಿ 9ರಂದು ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಹತ್ತು ನವಜಾತ ಶಿಶುಗಳು ಸಾವನ್ನಪ್ಪಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next