Advertisement

ಮುಂಬಯಿ: ಸೋಂಕಿತರನ್ನು ಕಾಡುತ್ತಿರುವ ಮಧುಮೇಹ

06:05 PM Aug 12, 2020 | Suhan S |

ಮುಂಬಯಿ, ಆ. 11: ಕಳೆದ ತಿಂಗಳು ನಡೆದ ಮೊದಲ ಸೀರೋ ಸಮೀಕ್ಷೆಯಲ್ಲಿ ಕೊಳೆಗೇರಿ ನಿವಾಸಿಗಳಲ್ಲಿ ಪತೆಯಾದ ಆ್ಯಂಟಿಬಾಡಿ ಅಭಿವೃದ್ಧಿಯಾದವರ ಪೈಕಿ ಶೇ. 6ರಷ್ಟು ಮಂದಿ ಮಧುಮೇಹ ಹೊಂದಿದ್ದು, ಕೊಳೆಗೇರಿ ಪ್ರದೇಶಗಳ ಪರೀಕ್ಷೆಗಳಲ್ಲಿ ಒಟ್ಟು ಶೇ. 9ರಷ್ಟು ಆ್ಯಂಟಿಬಾಡಿ ಇರುವುದು ಕಂಡುಬಂದಿದೆ ಎಂದು ಟಾಟಾ ಇನ್‌ ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಸಂಸ್ಥೆ ತಿಳಿಸಿದೆ.

Advertisement

ಮುಂಬಯಿಯ ಜನಸಂಖ್ಯೆಯ ಶೇ. 20ರಷ್ಟು ಶ್ರೀಮಂತ ವರ್ಗದವರಿಗೆ ಮಧುಮೇಹವಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಧುಮೇಹದಿಂದ ಬಳಲುತ್ತಿರುವವರು ಸೋಂಕಿಗೆ ಹೆಚ್ಚು ಗುರಿಯಾಗುತ್ತಿದ್ದು, ಈ ಕುರಿತು ನಿರ್ಧರಿಸಲು ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ಸಂದರ್ಭ ಸುಮಾರು 4,218 ಕೊಳೆಗೇರಿ ನಿವಾಸಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 2,387 ಪ್ರತಿಕಾಯಗಳ ಹರಡುವಿಕೆ ಇದೆ ಎಂದು ತಿಳಿದು ಬಂದಿದೆ.

ಟಿಐಎಫ್ ಆರ್‌ ಸಂಶೋಧಕರ ಪ್ರಕಾರ, ಪ್ರತಿಕಾಯಗಳೊಂದಿಗೆ ಪತ್ತೆಯಾದ 144 ನಿವಾಸಿಗಳು ಮಧುಮೇಹದ ಸಮಸ್ಯೆಯನ್ನು ಹೊಂದಿದ್ದು, ಕೊಳೆಗೇರಿ ಪ್ರದೇಶಗಳಲ್ಲಿ, ಪ್ರತಿಕಾಯ ಪರೀಕ್ಷೆಯಲ್ಲಿ ಪಾಸಿಟಿವ್‌ ಪರೀಕ್ಷಿಸಿದ 358ರಲ್ಲಿ 30 ನಿವಾಸಿಗಳಿಗೆ ಮಧುಮೇಹ ಕಂಡು ಬಂದಿದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಹೆಚ್ಚಿನ ಅಧ್ಯಯನದ ಅಗತ್ಯವಿದೆ : ಸಮೀಕ್ಷೆಯ ಪ್ರಧಾನ ತನಿಖಾಧಿಕಾರಿ ಉಲ್ಲಾಸ್‌ ಎಸ್‌. ಕೋಲ್ತರ್‌ ಮತ್ತು ಟಿಐಎಫ್‌ ಆರ್‌ನ ಸಂಶೋಧಕ ಸಂದೀಪ್‌ ಜುನೆಜಾ ಮಾತನಾಡಿ, ಕೊಳೆಗೇರಿ ಪ್ರದೇಶಗಳ ಜನರ ಜೀವನಶೈಲಿಯಿಂದ ಸೋಂಕು ಹರಡುವಿಕೆ ಹೆಚ್ಚು ಇರಬಹುದು ಎಂದಿದ್ದಾರೆ. ಅನೇಕರು ತಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ತಪ್ಪು ಮಾಹಿತಿ ಒದಗಿಸಿರಬಹುದು. ಕ್ವಾರಂಟೈನ್‌ ಗೆ ಒಳಗಾಗುವ ಭಯದಿಂದ ಸುಳ್ಳು ಮಾಹಿತಿ ಒದಗಿಸಿರಬಹುದು. ಒಟ್ಟಿನಲ್ಲಿ ಸರಿಯಾದ ಸಂಗತಿಗಳನ್ನು ತಿಳಿಸಲು ಹೆಚ್ಚಿನ ಅಧ್ಯಯನಗಳ ಆವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಉತ್ಪಾದಿಸಿದ ಇಮ್ಯುನೊಗ್ಲಾಬ್ಯುಲಿನ್‌-ಜಿ (ಐಜಿಜಿ) ಪ್ರತಿಕಾಯದ ಉಪಸ್ಥಿತಿಯನ್ನು ಕಂಡುಹಿಡಿಯಲು ಎಂ-ವೆಸ್ಟ್‌ ವಾರ್ಡ್‌ನ ತಿಲಕ್‌ ನಗರ ಮತ್ತು ಚೆಂಬೂರು, ಎಫ್ ನಾರ್ತ್‌ನ ಮಾಟುಂಗಾ, ಸಯಾನ್‌ ಮತ್ತು ವಡಾಲಾ ಹಾಗೂ ಆರ್‌-ನಾರ್ತ್‌ ವಾರ್ಡ್‌ನ ದಹಿಸರ್‌ ಮತ್ತು ಮಂದಪೇಶ್ವರದಲ್ಲಿ ಸೀರೋ ಸಮೀಕ್ಷೆಯನ್ನು ನಡೆಸಲಾಯಿತು. ಈ ಹಿಂದೆ ಸೋಂಕಿಗೆ ಒಳಗಾದ ಬಳಿಕ ಚೇತರಿಸಿಕೊಂಡ ವ್ಯಕ್ತಿಗಳನ್ನು ಗುರುತಿಸಲು ಸೀರೊ ಸಮೀಕ್ಷೆ ಸಹಾಯ ಮಾಡುತ್ತದೆ.

Advertisement

ರಾಜ್ಯದ ಕೋವಿಡ್‌ ಕಾರ್ಯಪಡೆಯ ಭಾಗವಾಗಿರುವ ಮಧುಮೇಹ ತಜ್ಞ ಡಾ| ಶಶಾಂಕ್‌ ಜೋಶಿ ಮಾತನಾಡಿ, ಕೊಳೆಗೇರಿ ಪ್ರದೇಶಗಳಲ್ಲಿನ ನಿವಾಸಿಗಳ ಸಹಕಾರ ಕೊರತೆಯಿಂದಾಗಿ ಕೇವಲ 6,936 ಮಾದರಿಗಳನ್ನು ಸಂಗ್ರಹಿಸಲಾಗಿದೆ.ಬಿಎಂಸಿಯು 1,000 ಆರೋಗ್ಯ ಕಾರ್ಯಕರ್ತರ ಮೇಲೆ ಆ್ಯಂಟಿಬಾಡಿ ಪರೀಕ್ಷೆಯನ್ನು ಸಹ ನಡೆಸಿದ್ದು, ಫಲಿತಾಂಶಗಳಿಗಾಗಿ ಕಾಯುತ್ತಿದೆ. ನಗರದಲ್ಲಿ ಸೋಂಕಿನಿಂದ ಮೃತಪಟ್ಟ ಸುಮಾರು ಶೇ. 50ರಷ್ಟು ರೋಗಿಗಳು ಮಧುಮೇಹದ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next