ಮುಂಬಯಿ: ವಿವಾಹಿತ ಮಹಿಳೆ ಜೊತೆ ಸಂಬಂಧ ಹೊಂದಿದ್ದ ಪೇದೆಯೊಬ್ಬ, ಆಕೆಯ ನಂಬಿಕೆಯನ್ನು ಮುರಿದ ಆರೋಪದ ಮೇಲೆ ಕೆಲಸದಿಂದ ವಜಾಗೊಂಡಿದ್ದಾರೆ.
ಸೆಂಟ್ರಲ್ ಮುಂಬೈನ ತಾರ್ಡಿಯೊದಲ್ಲಿ ಸ್ಥಳೀಯ ಶಸ್ತ್ರಾಸ್ತ್ರ ವಿಭಾಗದಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಸೋಮನಾಥ್ ಅಂಗುಲೆ ಅವರ ನಡವಳಿಕೆಯು ಸೇವಾ ನಿಯಮಗಳನ್ನು ಉಲ್ಲಂಘಿಸಿದೆ ಅಧಿಕಾರಿ ತಿಳಿಸಿದ್ದಾರೆ.
ಅಂಗುಲೆ 2019 ರಲ್ಲಿ ಜೆಜೆ ಪೊಲೀಸ್ ಠಾಣೆಯಲ್ಲಿ ಪೋಸ್ಟ್ ಮಾಡುತ್ತಿದ್ದ ವೇಳೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ಇದಾದ ಬಳಿಕ ಆಕೆಯೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಕೆಲ ಸಮಯದ ಬಳಿಕ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಜೋಡಿಗೆ ಮಗುವಾಗಿದೆ. ತಾನು ಅದೇ ಮಹಿಳೆಯೊಂದಿಗೆ ವಿವಾಹವಾಗುತ್ತೇನೆ ಎಂದು ಪೇದೆ ಅಂಗುಲೆ ಮಾತು ಕೊಟ್ಟಿದ್ದರು. ಈ ಕುರಿತು ಸ್ಟ್ಯಾಂಪ್ ಪೇಪರ್ ನಲ್ಲಿ ಸಹಿ ಕೂಡ ಮಾಡಿದ್ದರು.
ಆದರೆ ಮಹಿಳೆ ಅಂಗುಲೆ ತನ್ನನ್ನು ಮದುವೆಯಾಗದೆ ತನ್ನ ನಂಬಿಕೆಯನ್ನು ಮುರಿದ್ದಾನೆ ಎಂದು ಹಿರಿಯ ಪೊಲೀಸರ ಬಳಿ ಆರೋಪಿಸಿದ್ದಾರೆ. ನಂತರ ಇಲಾಖಾ ವಿಚಾರಣೆಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ.
ಇದಾದ ಬಳಿಕ ಅಂಗುಲೆ ಅವರನ್ನು ಟಾರ್ಡಿಯೊದಲ್ಲಿ ಸ್ಥಳೀಯ ಶಸ್ತ್ರಾಸ್ತ್ರ ವಿಭಾಗಕ್ಕೆ ವರ್ಗಾಯಿಸಲಾಯಿತು. ಆ ನಂತರ ಈ ಬಗ್ಗೆ ವಿಚಾರಣೆ ಪೂರ್ಣಗೊಂಡ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.