Advertisement
ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಸಿ, ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಮಾನವಿಕ ಮತ್ತು ವಿಜ್ಞಾನ (ಹ್ಯೂಮ್ಯಾ ನಿಟಿಸ್ ಆ್ಯಂಡ್ ಸೈನ್ಸ್) ಹಾಗೂ ಸೈಂಟ್ ಜೋನ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಎಂಎಂಎಸ್ ವಿಭಾಗದ ಘಟಿಕೋತ್ಸವ ನೆರವೇರಿ, ಬಾಟು ಲೋನೆರ್ ಮತ್ತು ಎನ್ ಪಿಸಿಐಎಲ್ ಲಿ. ಮುಂಬಯಿ ಪ್ರಪ್ರಥಮ ಮಾಜಿ ಉಪಕುಲಪತಿ ಡಾ| ಜಿ. ವಿ ಗೈಕಾರ್ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದರು.
ಗೌರವ ನೀಡಿ, ತಾನು ಕಲಿತ ಶಿಕ್ಷಣ ಸಂಸ್ಥೆ, ಗುರುಗಳನ್ನು ಹಾಗೂ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದರು. ಡಾ| ಜಿ. ವಿ. ಗೈಕರ್ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ವಿ ಯಾಗಲು ಅಗತ್ಯವಾದ ಸುಸಂಸ್ಕೃತ ಕಲಿಕೆ
ಯಂತಹ ಅಂಶಗಳ ಮೇಲೆ ಮಾಹಿತಿ ನೀಡಿದರು. ಭವಿಷ್ಯದ ವಿವಿಧ ಪ್ರಯತ್ನ ಗಳಲ್ಲಿ ಯಶಸ್ವಿಯಾಗಲು ಧೈರ್ಯ ಮತ್ತು
ಸಹಯೋಗ ಮತ್ತು ಪರಿಣತಿಯನ್ನು ಹಂಚಿಕೊಳ್ಳುವ ಅಗತ್ಯ ತಿಳಿಸಿದ ಅವರು, ವಿದ್ಯಾರ್ಥಿಗಳು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ
ನೀಡಬೇಕು ಎಂದರು.
Related Articles
ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಜಾಗತಿಕ ಶಾಂತಿ ನೆಮ್ಮದಿಗಾಗಿ ಸಾರ್ವತ್ರಿಕ ಪ್ರಾರ್ಥನೆ ನಡೆಸಿ
ಸರ್ವಶಕ್ತ ದೇವರಿಗೆ ಪ್ರಾರ್ಥಿಸಿ ಸರಸ್ವತಿ ವಂದನೆಯೊಂದಿಗೆ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಆಲ್ಬರ್ಟ್
ಡಬ್ಲ್ಯು. ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವಿಸಿದರು.
Advertisement
ಎಐಸಿಟಿಇಯ ಗೌರವಾನ್ವಿತ ಅಧ್ಯಕ್ಷ ಪ್ರೊ| ಅನಿಲ್ ಡಿ. ಸಹಸ್ತ್ರಬುದ್ಧೆ ಮತ್ತು ಮುಂಬಯಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಉಪಕುಲಪತಿ ಪ್ರೊ| ಡಿ. ಟಿ. ಶಿರ್ಕೆ ಅವರ ವೀಡಿಯೋ ಭಾಷಣವನ್ನು ಬಿತ್ತರಿಸಲಾಯಿತು.
ಎಸ್‌ಜೆಸಿ ಫಾರ್ಮಸಿಯ 76 ವಿದ್ಯಾರ್ಥಿಗಳು, ಎಸ್‌ಜೆಸಿ ಹ್ಯೂಮ್ಯಾನಿಟಿಸ್ ಆ್ಯಂಡ್ ಸಾಯನ್ಸ್ ವಿಭಾಗದ 239 ವಿದ್ಯಾರ್ಥಿಗಳುಹಾಗೂ ಎಸ್‌ಜೆಸಿ ಎಂಜಿನಿಯರಿಂಗ್ ಮತ್ತು ಎಂಎಂಎಸ್ ವಿಭಾಗದ 415 ವಿದ್ಯಾರ್ಥಿ ಗಳು ಪದವಿ ಪ್ರಮಾಣಪತ್ರ ಸ್ವೀಕರಿಸಿದರು.
ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಿಭಾಗದ ಕಾರ್ಯವೈಖರಿಯನ್ನು ವಿವರಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ
ದರು. ವಿಭಾಗವಾರು ಫೋಟೋ ಸೆಷನ್ ನಡೆಸಿ ವಿದ್ಯಾರ್ಥಿಗಳಿಗೆ ಜೀವಮಾನದ ಪ್ರಮಾಣಪತ್ರ ಮತ್ತು ಸ್ಮರಣಿಗಳನ್ನಿತ್ತು
ಗೌರವಿಸಲಾಯಿತು. ಆಲ್ಢೇಲ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಎಲ್ವಿನಾ ಎ. ಡಿ’ಸೋಜಾ, ಕೋಶಾಧಿಕಾರಿ ಎಲೈನ್ ಆರ್. ಬುಥೆಲ್ಲೋ, ಸದಸ್ಯ ಆಲ್ಡಿ†ಜ್ ಎ. ಡಿ’ಸೋಜಾ, ಉಪ ಕ್ಯಾಂಪಸ್ ನಿರ್ದೇಶಕಿ ಮತ್ತು ಎಸ್‌ಜೆಸಿಎಫ್ ಆರ್ ಪ್ರಾಂಶುಪಾಲೆ ಡಾ| ಸವಿತಾ ತೌರೊ,
ಎಸ್‌ಜೆಸಿಇಎಂ ಪ್ರಾಂಶುಪಾಲ ಡಾ| ಜಿ. ವಿ. ಮುಳಗುಂದ, ಸೈಂಟ್ ಜೋನ್ ಮಾನವಿಕ ಮತ್ತು ವಿಜ್ಞಾನ ಕಾಲೇಜಿನ ಮುಖ್ಯಸ್ಥ ಡಾ| ಬೃಜಬಂಧು ದಾಸ್ ಉಪಸ್ಥಿತರಿದ್ದರು. ಕ್ಯಾಂಪಸ್‌ನ ಜನರಲ್ ಮ್ಯಾನೇಜರ್ ಸತೀಶ್ ಶೆಟ್ಟಿ, ಮಾನವ ಸಂಪನ್ಮೂಲ ವ್ಯವಸ್ಥಾಪಕ ಸುಧೀರ್ ಬಾಬು ಭಾಗವಹಿಸಿದ್ದರು. ವೃಶಾಲಿ ಗೋಖಲೆ, ಡಾ| ಪಂಢರೀನಾಥ ಘೋಂಗೆ ಮತ್ತು ಶ್ರೀಶೈಲಾ ಹೆಗ್ಗೊಂಡ ನಿರೂಪಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕ
ರಿಸಿದರು. ಸಹಾಯಕ ಪ್ರೊ| ಏಕ್ತಾ ಠಾಕೂರ್ ಮತ್ತು ಬೀಟ್ರಿಸ್ ಲೋಬೋ ಸಭಾ ಕಾರ್ಯ ಕ್ರಮವನ್ನು ನಿರ್ವಹಿಸಿದರು. ಡಾ| ಜಿ. ವಿ. ಮುಳಗುಂದ ಮತ್ತು ಡಾ| ಸವಿತಾ ತೌರೊ ವಂದಿಸಿದರು. ಸಂಸ್ಥೆಯ ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಚಿತ್ರ – ವರದಿ: ರೊನಿಡಾ ಮುಂಬಯಿ