Advertisement

ಋತುಸ್ರಾವಕ್ಕೆ ಮಹಿಳೆಯರಿಗೆ ರಜೆ ಕೊಟ್ಟ ಕಂಪನಿಗಳು

03:05 AM Jul 13, 2017 | Team Udayavani |

ಮುಂಬೈ: ಮಹಿಳೆಯರಿಗೆ ಅತ್ಯಂತ ಕಿರಿಕಿರಿಯ ದಿನಗಳೆಂದರೆ ಋತುಸ್ರಾವದ ದಿನಗಳು. ಈ ದಿನಗಳಲ್ಲಾ ಗುವ ದೈಹಿಕ ಮತ್ತು ಮಾನಸಿಕ ಏರುಪೇರುಗಳಿಂದ ಉದ್ಯೋಗಸ್ಥ ಮಹಿಳೆಯರು ಸಾಕಷ್ಟು ಜರ್ಝರಿತರಾಗಿರುತ್ತಾರೆ. ಮುಂಬೈನ 2 ಕಂಪನಿಗಳು ಮಹಿಳೆಯರಿಗೆ ಋತುಸ್ರಾವದ ಮೊದಲನೇ ದಿನ ರಜೆ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿವೆ. ಅವುಗಳ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಕಂಪನಿಗಳು ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಋತುಸ್ರಾವ ಮೊದಲ ದಿನದ ಅತ್ಯಂತ ಪ್ರಯಾಸದಾಯಕ ದಿನ. ಅದಕ್ಕಾಗಿ ಮಹಿಳೆಯರಿಗೆ ರಜೆ ನೀಡುವುದು ಒಂದು ಪ್ರಾಯೋಗಿಕ ಕ್ರಮ’ ಎಂದಿದ್ದಾರೆ ಕಲ್ಚರ್‌ ಮಶಿನ್‌ ಎಚ್‌ಆರ್‌ ಆಗಿರುವ ದಳ್ವೀನಾ ಮಜುಂದಾರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next