Advertisement
ಮಾ. 9ರಂದು ಸಂಜೆ ವಾಶಿಯ ಹೊಟೇಲ್ ರಮಾಡ ಟೆರೇಸ್ ಗಾರ್ಡನ್‌ನಲ್ಲಿ ಜರಗಿದ ಕಾಳಾವರ ಶ್ರೀ ಮಹಾಲಿಂಗೇಶ್ವರ ಶ್ರೀ ಕಾಳಿಂಗ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂಬಯಿ ಇದರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ತಾನು ಕೈಲಾದಷ್ಟು ಸಹಕಾರ ನೀಡುತ್ತೇನೆ. ಎಲ್ಲರೂ ದೊಡ್ಡ ಮನಸ್ಸಿನಿಂದ ಈ ಯೋಜನೆಗೆ ಕೈಜೋಡಿಸುವಂತೆ ವಿನಂತಿಸಿದರು.
Related Articles
Advertisement
ಜೀರ್ಣೋದ್ಧಾರ ಮುಂಬಯಿ ಸಮಿತಿಯ ಸಂಚಾಲಕ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ಮಾತನಾಡಿ, ದೇವರ ಸೇವೆ ಮಾಡಲು ಯೋಗಾನುಯೋಗ ಬೇಕು. ಸಮಿತಿಯಲ್ಲಿ ಉದ್ಯಮಿಗಳು, ಸಹೃದಯವಂತರು, ಗಣ್ಯವ್ಯಕ್ತಿಗಳು ಅನೇಕರಿದ್ದಾರೆ. ಗ್ರಾಮಕ್ಕೆ ಸಂಬಂಧಿಸಿದ ಎಲ್ಲರೂ ಸಹಕರಿಸುವ ಜತೆಗೆ ದೇಣಿಗೆ ಸಂಗ್ರಹಿಸುವ ಕಾರ್ಯದಲ್ಲಿ ಸಮಿತಿಯೊಂದಿಗೆ ಸಹಕರಿಸುವಂತೆ ವಿನಂತಿಸಿದರು. ಸುಬ್ರಹ್ಮಣ್ಯ ಶೆಟ್ಟಿ ಅವರು ದೇವಸ್ಥಾನದ ಹಿನ್ನೆಲೆಯನ್ನು ವಿವರಿಸಿ, ದಕ್ಷಿಣ ಕನ್ನಡದ ಜನರು ದೇವರು ಮತ್ತು ದೈವದ ಮೇಲಿಟ್ಟಿರುವ ಅಪಾರ ನಂಬಿಕೆ, ಭಕ್ತಿಯಿಂದ ಪ್ರತಿಯೊಂದು ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ಧಿಯಾಗುತ್ತಿದೆ. ಈ ಶುಭ ಕಾರ್ಯಕ್ಕೆ ಸಮಿತಿಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದರು. ಕೃಷ್ಣದೇವ ಕಾರಂತ ಅವರು ಮಾತನಾಡಿ, ದೇವಸ್ಥಾನವು ಸುಮಾರು 800 ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿದ್ದು, ಈ ಯೋಜನೆಗೆ ಸುಮಾರು ಮೂರೂವರೆ ಕೋ. ರೂ.ಗಳು ವ್ಯಯವಾಗಬಹುದೆಂದು ಅಂದಾಜಿಸ
ಲಾಗಿದೆ. ಈ ದೇವಸ್ಥಾನವು ಭಕ್ತರಲ್ಲಿ ಭಯ ಮತ್ತು ಭಕ್ತಿ ಹುಟ್ಟಿಸುವಂತಹ ವಿಶಿಷ್ಟ ಕ್ಷೇತ್ರವಾಗಿದೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಂತೆ ಎರಡನೇ ಖ್ಯಾತಿ ಹೊತ್ತ ಕ್ಷೇತ್ರ ಇದಾಗಿದೆ ಎಂದರು. ಆರಂಭದಲ್ಲಿ ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆ ಗೈದರು. ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಅತಿಥಿ ಐಕಳ ಹರೀಶ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಸಿಎ ಸಂಜೀವ ಶೆಟ್ಟಿ ಸ್ವಾಗತಿಸಿ ಯೋಜನೆಗೆ ಸರ್ವರ ಸಹಕಾರ ಕೋರಿದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಸಂಚಾಲಕ ಉಳೂ¤ರು ಮೋಹನ್‌ದಾಸ್ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ ಎನ್. ಶೆಟ್ಟಿ, ಅಧ್ಯಕ್ಷ ದಿನಕರ ಎನ್. ಶೆಟ್ಟಿ, ಸಂಚಾಲಕ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಉಪಾಧ್ಯಕ್ಷರಾದ ಸಿಎ ಸಂಜೀವ ಶೆಟ್ಟಿ, ಸುರೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ದೇವಸ್ಥಾನ ಸಮಿತಿ ಕಾಳಾವರ ಇದರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮೊಕ್ತೇಸರ ರವಿರಾಜ್ ಶೆಟ್ಟಿ ಕಾಳಾವರ, ಕೃಷ್ಣದೇವ್ ಕಾರಂತ, ಸುಬ್ರಹ್ಮಣ್ಯ ಶೆಟ್ಟಿ, ಹರೀಶ್ ಎನ್. ಶೆಟ್ಟಿ, ಮುಂಬಯಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಸುರೇಶ್ ಶೆಟ್ಟಿ ಮರಾಠ, ಆದರ್ಶ್ ಶೆಟ್ಟಿ, ಅಶೋಕ್ ಶೆಟ್ಟಿ, ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು