ಮುಂಬೈ : ನಗರದ ದಹಿಸರ್ ಪ್ರದೇಶದಲ್ಲಿ ಬಾರ್& ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಗಿದ್ದು, ವಿಶೇಷವಾಗಿ ನಿರ್ಮಿಸಲಾದ ಕುಳಿಯೊಳಗಿಂದ ಹಲವಾರು ಮಹಿಳೆಯರನ್ನು ರಕ್ಷಿಸಲಾಗಿದೆ. ಹಲವರು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ನಡೆದ ದಾಳಿಯಲ್ಲಿ ಮ್ಯಾನೇಜರ್ ಸೇರಿದಂತೆ 19 ಗ್ರಾಹಕರು ಮತ್ತು ಆರು ಸಿಬಂದಿಯನ್ನು ಬಂಧಿಸಲಾಗಿದೆ ಎಂದು ದಹಿಸರ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನಾವು ಡ್ಯಾನ್ಸ್ ಫ್ಲೋರ್ನಲ್ಲಿ ನಾಲ್ವರು ಮಹಿಳೆಯರನ್ನು ಕಂಡುಕೊಂಡಿದ್ದೇವೆ, ಆದರೆ 17 ಮಹಿಳೆಯರನ್ನು ವಿಶೇಷವಾಗಿ ನಿರ್ಮಿಸಿದ ಕುಳಿಯಲ್ಲಿ ಮರೆಮಾಡಲಾಗಿತ್ತು, ದಾಳಿಯ ಸಮಯದಲ್ಲಿ ಪೊಲೀಸರನ್ನು ವಂಚಿಸಲು ಯತ್ನಿಸಲಾಗಿದೆ ಆದರೂ ಅವರನ್ನು ರಕ್ಷಿಸಲಾಗಿದೆ ಮತ್ತು ಬಿಡಲು ಅನುಮತಿಸಲಾಗಿದೆ” ಎಂದು ಅವರು ಹೇಳಿದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 ಅಡಿಯಲ್ಲಿ ಮಹಿಳೆಯರನ್ನು ಕುಳಿಯಲ್ಲಿ ಮರೆಮಾಡಿದ ರೀತಿ ಮತ್ತು ಅಶ್ಲೀಲತೆಗೆ ಸಂಬಂಧಿಸಿದ ಇತರ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.