Advertisement

ಅಧ್ಯಕರಾಗಿ ಮುಂಬಯಿ ಸಾಹಿತಿ  ಬಾಬು ಶಿವ ಪೂಜಾರಿ ಆಯ್ಕೆ

07:24 PM Jan 23, 2021 | Team Udayavani |

ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮುಂಬಯಿ ಸಾಹಿತಿ, ಸಂಶೋ ಧಕ ಬಾಬು ಶಿವ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.

Advertisement

ಜ. 24 ರಂದು ಬ್ರಹ್ಮಾವರದ ಸಾೖಬ್ರಕಟ್ಟೆಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬಾಕೂìರಿನಲ್ಲಿ ಜನಿಸಿದ ಬಾಬು ಶಿವ ಪೂಜಾರಿ ಅವರು ಪತ್ರಿಕೋದ್ಯಮದ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಹೊಟೇಲ್‌ ಉದ್ಯಮದಲ್ಲಿ ತೊಡಗಿಕೊಂಡಿರುವ ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕುರಿತು ವಿಶೇಷವಾದ ಆಸ್ಥೆಯನ್ನಿಟ್ಟುಕೊಂಡಿದ್ದಾರೆ.

ಗುರುತು ಮಾಸಿಕದ ಸಂಪಾದಕರಾಗಿದ್ದ ಅವರು ವಿಶೇಷವಾಗಿ ಸಾಂಸ್ಕೃತಿಕ ಅಧ್ಯಯನ ದಲ್ಲಿ ನಿರತರಾಗಿದ್ದಾರೆ. “ಬಿಲ್ಲವರು ಒಂದು ಅಧ್ಯಯನ’ ಅವರ ಮಹತ್ವದ ಸಂಶೋಧನ ಕೃತಿ. ಬಿಲ್ಲವ ಜನಾಂಗದ ಚರಿತ್ರೆ, ಅವರ ಹಿನ್ನೆಲೆ, ವೃತ್ತಿ, ಜೀವನ ಪದ್ಧತಿ ಮೇಲೆ ಹೊಸ ಬೆಳಕು ಚೆಲ್ಲುವ ಕೃತಿಗಳನ್ನು ಅವರು ರಚಿಸಿದ್ದಾರೆ.

ಜಾಗೃತಿ ಬಳಗದ ಮುಖವಾಣಿ ಗುರುತು ಮಾಸಿಕ ದಲ್ಲಿ ಬಿಲ್ಲವರ ಇತಿಹಾಸವನ್ನೊಳಗೊಂಡ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸಿದ ಶ್ರೇಯಸ್ಸನ್ನು ಹೊಂದಿದ್ದಾರೆ. “ಬಿಲ್ಲವರ ಗುತ್ತು ಮನೆತನಗಳು’ ಎಂಬ ಸಂಶೋಧನಾತ್ಮಕ ಗ್ರಂಥವು ಇತ್ತೀಚೆಗೆ ಬೆಳಕು ಕಂಡಿದೆ. ಅವರು ಜನಾಂಗಿಕ ಅಧ್ಯಯನ, ಜಾನಪದ ಅಧ್ಯಯನದ ಕುರಿತು ಅನೇಕ ಲೇಖನ ಗಳನ್ನು ಬರೆದಿದ್ದಾರೆ.

ಇದನ್ನೂ ಓದಿ:ಇಷ್ಟದ ಕೆಲಸದಿಂದ ಯಶಸ್ಸು: ನಂಜುಂಡಸ್ವಾಮಿ

Advertisement

ದಾರ್ಶನಿಕ, ಸುಧಾರಣಾವಾದಿ ನಾರಾಯಣಗುರು ಗಳ ಜೀವನ ಸಾಧನೆ ಯನ್ನು ತಿಳಿ ಹೇಳುವ “ಶ್ರೀ ನಾರಾಯಣಗುರು ವಿಜಯ ದರ್ಶನ’ ಎಂಬ ಕೃತಿಯನ್ನು ರಚಿಸಿದ್ದಾರೆ. ಕನ್ನಡ, ತುಳು ಚಟುವಟಿಕೆಗಳಿಗೆ ಎಲ್ಲ ರೀತಿಗಳಿಂದಲೂ ಸಹಕರಿಸುತ್ತಿರುವ ಅವರು ಸರಳ ಸಜ್ಜನಿಕೆಗೆ ಹೆಸರಾದರು. ಗುರುತು ಪತ್ರಿಕೆಯ ಮೂಲಕ ಕನ್ನಡ ನಾಡು-ನುಡಿಯನ್ನು ಬಿಂಬಿಸುವ ಅವರ ಕೃತಿಗಳು ಪ್ರಕಟಗೊಂಡಿದೆ. ಪ್ರಾರಂಭದಲ್ಲಿ ಅಕ್ಷಯ ಮಾಸಿಕದಲ್ಲಿ ಪ್ರಸ್ತುತ ಗುರುತು ಪತ್ರಿಕೆಯ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next