Advertisement
ಜಪಾನ್ ಕಂಪೆನಿಗಳ ಜತೆ ಚರ್ಚೆ ನಡೆಸಿ, ಈ ಯೋಜನೆ ಪೂರ್ಣಗೊಳಿಸುವ ಬಗ್ಗೆ ಪರಿಷ್ಕೃತ ಸಮಯ ನಿಗದಿಪಡಿಸಲಾಗುವುದು. ಪ್ರಕ್ರಿಯೆ ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದರೆ ಬೇಗ ಯೋಜನೆ ಯನ್ನು ಪೂರ್ಣಗೊಳಿಸಬಹುದು. ಆದರೆ ಕೊರೊನಾ ಬಿಕ್ಕಟ್ಟಿನಂಥ ತಾಂತ್ರಿಕ ಸಮಸ್ಯೆ ಗಳು ಇದ್ದು, ನಿಗದಿತ ಸಮಯದಲ್ಲಿ ಯೋಜನೆ ಮುಗಿಸಲು ಆಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
508 ಕಿ.ಮೀ. ಪೈಕಿ 21 ಕಿ.ಮೀ. ಸಂಪರ್ಕ ಜಾಲವನ್ನು ಭೂಗತವಾಗಿ ನಿರ್ಮಿಸಬೇಕಾಗಿದೆ. ಇದರಲ್ಲಿ 5 ಕಿ.ಮೀ. ಜಾಲವು ಮುಂಬಯಿಯ ಸಮುದ್ರದ ಕೆಳಗೆ ಹಾದು ಹೋಗಬೇಕಿದೆ. ಈ ಕ್ಲಿಷ್ಟಕರ 21 ಕಿ.ಮೀ. ಸಂಪರ್ಕ ಜಾಲವನ್ನು ನಿರ್ಮಿಸಲು 60 ತಿಂಗಳು ಸಮಯ ಬೇಕಾಗುತ್ತದೆ. ಈ ಕುರಿತು ಜಪಾನ್ ಕಂಪೆನಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೇ ಜಪಾನ್ ಕಂಪೆನಿಗಳು ಕಾರ್ಯಗತಗೊಳಿಸಬೇಕಿದ್ದ 11 ಟೆಂಡರ್‌ಗಳಲ್ಲಿ ಯೋಜನಾ ಸಲಹೆಗಾರರು ಅಂದಾಜಿಸಿದ್ದಕ್ಕಿಂತ ಶೇ.90ರಷ್ಟು ಹೆಚ್ಚು ಬೆಲೆಯನ್ನು ನಮೂದಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ನೀಡಲು ಭಾರತ ನಿರಾಕರಿಸಿದೆ ಎನ್ನಲಾಗಿದೆ.