Advertisement

ಮುಂಬಯಿಯ ಶೇ.99 ಐಸಿಯು ಬೆಡ್‌ ಭರ್ತಿ

01:01 PM Jun 14, 2020 | sudhir |

ಮುಂಬಯಿ: ದೇಶದ ವಾಣಿಜ್ಯ ನಗರಿ ಮುಂಬಯಿನಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನಗರದಲ್ಲಿರುವ ಐಸಿಯು ಬೆಡ್‌ಗಳ ಪೈಕಿ ಶೇ.99ರಷ್ಟು ಭರ್ತಿಯಾಗಿವೆ. ಬೃಹನ್ಮುಂಬೈ ಮುನ್ಸಿಪಲ್‌ ಕಾರ್ಪೊರೇಶನ್‌ (ಬಿಎಂಸಿ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜೂನ್‌ 11ರವರೆಗೆ 1,181 ಐಸಿಯು ಬೆಡ್‌ಗಳ ಪೈಕಿ 1,167ಬೆಡ್‌ಗಳು ಭರ್ತಿಯಾಗಿವೆ.

Advertisement

ಕೇವಲ 14 ಹಾಸಿಗೆಗಳು ಖಾಲಿ ಇವೆ. 530 ವೆಂಟಿಲೇಟರ್‌ಗಳ ಪೈಕಿ 497 ವೆಂಟಿಲೇಟರ್‌ಗಳು (ಶೇ.94) ಬಳಕೆಯಲ್ಲಿವೆ. ಆಮ್ಲಜನಕದ ಪೂರೈಕೆ ಲಭ್ಯವಿರುವ 5,260 ಹಾಸಿಗೆಗಳ ಪೈಕಿ 3,986 ಹಾಸಿಗೆಗಳು (ಶೇ.76) ಭರ್ತಿಯಾಗಿವೆ. ನಗರದಾದ್ಯಂತ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟ ಆಸ್ಪತ್ರೆಗಳಲ್ಲಿನ 10,450 ಹಾಸಿಗೆಗಳ ಪೈಕಿ 9,098 (ಶೇ.87) ಹಾಸಿಗೆಗಳು ಭರ್ತಿಯಾಗಿವೆ. ಈ ಮಧ್ಯೆ, ತೀವ್ರತರದ ರೋಗ ಲಕ್ಷಣವಿರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next