ಮುಂಬಯಿ: ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಮಂಗಳವಾರ ನಗರದ ವಿವಿಧ ಭಾಗಗಳಲ್ಲಿ ಹಲವಾರು ಗೋವಿಂದ ತಂಡಗಳ ಸದಸ್ಯರು ಅತ್ಯಂತ ಅದ್ದೂರಿಯಿಂದ ದಹಿ ಹಂಡಿ ಉತ್ಸವ ಆಚರಿಸಿದರು. ಈ ವೇಳೆ ಮಾನವ ಪಿರಮಿಡ್‌ಗಳನ್ನು ನಿರ್ಮಿಸುವಾಗ ನಡೆದ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು,197 ಮಂದಿ ಗಾಯಗೊಂಡಿದ್ದಾರೆ.
ಪಾಲ್ಘರ್‌ನಲ್ಲಿ ಮಾನವ ಪಿರಮಿಡ್ ಏರುವ ವೇಳೆ 21 ವರ್ಷದ ರೋಹನ್ ಗೋಪಿನಾಥ್ ಕಿಣಿ ಎನ್ನುವ ಯುವಕ ಮೃತಪಟ್ಟರೆ, ಐರೋಲಿಯಲ್ಲಿ 34 ವರ್ಷದ ನಾಗೇಶ್ ಶ್ರೀನಾಥ್ ಪಾರ್ಲೆ ಮೃತ ಪಟ್ಟಿದ್ದಾರೆ.
ಮಹಾರಾಷ್ಟ್ರದ ವಿವಿಧೆಡೆ 197 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ 5 ವರ್ಷಗಳಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ವೇಳೆ 5 ಮಂದಿ ಸಾವನ್ನಪ್ಪಿದ್ದು, 1,171 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಸುಪ್ರೀಂ ಕೋರ್ಟ್ 18 ವರ್ಷದ ಒಳಗಿನವರು ಮಾನವ ಪಿರಮಿಡ್‌ನಲ್ಲಿ ಪಾಲ್ಗೊಳ್ಳಲು ನಿಷೇಧ ಹೇರಿತ್ತು ಮತ್ತು ಪಿರಮಿಡ್‌ನ ಎತ್ತರವನ್ನು 20 ಅಡಿಗೆ ಮಿತಿ ಗೊಳಿಸಿತ್ತು.