Advertisement
ಯು ಮುಂಬಾ ಸಂಘಟಿತ ಹೋರಾಟದ ಮೂಲಕ ಗೆಲುವಿನ ದಡ ತಲುಪಿತು. ದಾಳಿಯಲ್ಲಿ ಗರಿಷ್ಠ ಅಂಕ ಗಳಿಸಿದ್ದು ಅಭಿಷೇಕ್ ಸಿಂಗ್. ವಿಶೇಷವೆಂದರೆ ಅವರು ಗಳಿಸಿದ್ದು ಬರೀ 5 ಅಂಕ. ಅದಕ್ಕಾಗಿ 15 ಬಾರಿ ಎದುರಾಳಿ ತಂಡದ ಕೋಟೆಗೆ ನುಗ್ಗಿ ಹೋದರು! ಮುಂಬಾ ಪರ ರಕ್ಷಣೆಯಲ್ಲಿ ಮಿಂಚಿದ್ದು ಸುರೀಂದರ್ ಸಿಂಗ್. ಅವರು 6 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ 4 ಅಂಕ ಪಡೆಯಲು ಸಫಲರಾದರು.
ಜೈಪುರಕ್ಕೆ ಜಯ
ಶನಿವಾರದ 2ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವೆ ರೋಚಕ ಹೋರಾಟ ನಡೆಯಿತು. ಜೈಪುರ 27-25 ಅಂಕಗಳ ಅಂತರದಿಂದ ಜೈಸಿತು. ಗೆಲುವಿನ ಅಂತರ ಕೇವಲ 2 ಅಂಕ ಎನ್ನುವುದು ನಿಕಟ ಹೋರಾಟಕ್ಕೆ ಸಾಕ್ಷಿ. ಜೈಪುರ್ ಪರ ಸಂದೀಪ್ ಧುಲ್ ಮತ್ತು ದೀಪಕ್ ಹೂಡ ಮಿಂಚಿದರು. ಗಮನ ಸೆಳೆದ ವಿರಾಟ್ ಕೊಹ್ಲಿ
ಪ್ರೊ ಕಬಡ್ಡಿ ಲೀಗ್‌ನ ಪ್ರತೀ ಚರಣದ ಆರಂಭದ ದಿನ ವಿಶೇಷ ಅತಿಥಿಯೊಬ್ಬರನ್ನು ಕರೆಯುವುದು ಸಂಪ್ರದಾಯ. ಅದರಂತೆ ಶನಿವಾರ ಮುಂಬಯಿ ಚರಣದ ಮೊದಲ ದಿನ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಟವನ್ನು ಉದ್ಘಾಟಿಸಿದರು. ಅಭಿಮಾನಿಗಳ ಆಕರ್ಷಣೆಯ ಕೇಂದ್ರ ಬಿಂದು ಅವರೇ ಆಗಿದ್ದರು. ಸ್ಟೇಡಿಯಂನಲ್ಲಿ ಕುಳಿತು ಕಬಡ್ಡಿ ರೋಮಾಂಚನವನ್ನು ಸವಿದರು.