Advertisement

ದಿಲ್ಲಿ ರಿಮೋಟ್‌ ಆಮ್‌ ಆದ್ಮಿ ಪಕ್ಷಕ್ಕೆ ಮುಳುವಾಯಿತ್ತೇ?

03:45 AM Mar 13, 2017 | |

ನವದೆಹಲಿ: ಕಾಂಗ್ರೆಸ್‌ ಫೀನಿಕ್ಸ್‌ನಂತೆ ಎದ್ದ ಕಾರಣದಿಂದ ಪಂಜಾಬ್‌ನಲ್ಲಿ ಆಪ್‌ನ ಅಧಿಕಾರದ ಕನಸು ನುಚ್ಚುನೂರಾಗಿ ರೋದು ಗೊತ್ತೇ ಇದೆ. ಎಲ್ಲ ಅವಕಾಶವಿದ್ದೂ ವಾಸ್ತವವಾಗಿ ಆಪ್‌ ಇಲ್ಲಿ ಕೇವಲ 20 ಸೀಟುಗಳಿಗೆ ತೃಪ್ತಿಪಟ್ಟುಕೊ ಳ್ಳಲು ಕಾರಣ ಏನು? ದಿಲ್ಲಿ ಕೇಂದ್ರಿತ ನಾಯಕತ್ವವೇ ಆಪ್‌ಗೆ ಅವನತಿ ಕಲ್ಪಿಸಿದವು ಎನ್ನುವುದು ಪ್ರಮುಖ ಆಂಗ್ಲ ಮಾಧ್ಯಮಗಳ ವಿಶ್ಲೇಷಣೆ.

Advertisement

1.ರಿಮೋಟ್‌ ದಿಲ್ಲಿಯಲ್ಲಿ: ಪಂಜಾಬ್‌ ಚುನಾವಣಾ ಸಿದ್ಧತೆಯ ಸಣ್ಣಪುಟ್ಟ ತಯಾರಿಗಳೂ ದಿಲ್ಲಿಯ ರಿಮೋಟ್‌ ಕಂಟ್ರೋಲ್‌ ಮೂಲಕವೇ ಆಗುತ್ತಿದ್ದವು. ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯ ಸಂಚಾಲಕ ಸುಚಾ ಸಿಂಗ್‌ ಛೊಟ್ಟೆಪುರ್‌ರನ್ನು ಉಚಾrಟಿಸಿದ್ದೇ ಮೊದಲ ಹಿನ್ನಡೆ. ರಾಜ್ಯ ಘಟಕದಲ್ಲಿ ಕೇಂದ್ರ ನಾಯಕರಾದ ಸಂಜಯ್‌ ಸಿಂಗ್‌ ಮತ್ತು ದುಗೇìಶ್‌ ಪಾಠಕ್‌ ಪ್ರವೇಶವನ್ನು ಛೊಟ್ಟೆಪುರ್‌ ಹಾಗೂ ಬೆಂಬಲಿಗರು ವಿರೋಧಿಸಿದ್ದರು. ಧುರೀಣರಲ್ಲಿ ಸಿಖ್‌ ಮುಖಗಳೇ ಆದ ಎಚ್‌ಎಸ್‌ ಫ‌ೂಲ್ಕಾ ಮತ್ತು ಜರ್ನೈಲ್‌ ಸಿಂಗ್‌ ದಿಲ್ಲಿ ಮೂಲದವರೇ ಹೊರತು ಪಂಜಾಬ್‌ನವರಲ್ಲ. “ಆಪ್‌ನದ್ದು ಬಾಹ್ಯನಾಯಕರ ಆಡಳಿತ’ ಎಂಬ ಬೇರೆ ಪಕ್ಷಗಳ ಟೀಕೆಯೂ ಮುಳ್ಳಾಯಿತು.

2.ಲೆಕ್ಕಕ್ಕಿಲ್ಲ ಲೋಕಲ್‌ ನಾಯಕರು: 2014ರಲ್ಲಿ ಗೆದ್ದ ಪಕ್ಷದ ಸಂಸದರನ್ನೂ ಆಪ್‌ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪಟಿಯಾಲ ಲೋಕಸಭಾ ಕ್ಷೇತ್ರದಿಂದ ಗೆದ್ದ ಧರ್ಮವೀರ ಗಾಂಧಿ ಮತ್ತು ಫ‌ತೇಗಢ್‌ ಸಾಹೇಬ್‌ನಿಂದ ವಿಜಯ ಸಾಧಿಸಿದ ಹರಿಂದರ್‌ ಸಿಂಗ್‌ ಖಾಲ್ಸಾ ಇಬ್ಬರೂ ಹೈಕಮಾಂಡ್‌ ನೀತಿಗಳನ್ನು ಖಂಡಿಸಿದಾಗ, ಪಕ್ಷ ಅವರನ್ನು ದೂರವಿಟ್ಟಿತ್ತು. ಇಬ್ಬರು ಸಂಸದರು, ಬೆಂಬಲಿಗರ ಪಕ್ಷ ವಿರೋಧಿ ಚಟುವಟಿಕೆ ಮೈನಸ್‌ ಆಯಿತು.

3.ಮಾಲ್ವಾ ಮೇಲಷ್ಟೇ ಫೋಕಸ್‌: 69 ಸೀಟುಗಳಿದ್ದ ಮಾಲ್ವಾ ವಲಯದ ಮೇಲಷ್ಟೇ ಆಪ್‌ ಫೋಕಸ್‌ ಮಾಡಿ, ಉಳಿದ ಭಾಗವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದೇ ಹೋಗಿದ್ದೇ ದೊಡ್ಡ ವೈಫ‌ಲ್ಯ. ಮಾಜಾØ ಮತ್ತು ದೋಬಾ ಪ್ರದೇಶಗಳಲ್ಲಿ 48 ಸೀಟುಗಳಿದ್ದರೂ ಅತ್ತ ಸ್ಟಾರ್‌ ಪ್ರಚಾರಕರು ಹೋಗಿದ್ದು ಕಡಿಮೆ. 

4. ಯಾರು ಸಿಎಂ ಅಭ್ಯರ್ಥಿ?: ಆಪ್‌ ಕೊನೆಗೂ ಈ ರಹಸ್ಯವನ್ನು ಜನರ ಮುಂದಿಡಲಿಲ್ಲ. ದೆಹಲಿಯ ಕುರ್ಚಿ ತ್ಯಜಿಸಿ ಕೇಜ್ರಿವಾಲ್‌ ಬರ್ತಾರೆ ಎಂಬ ಗಾಳಿಸುದ್ದಿಯನ್ನು ಸ್ವತಃ ಪಕ್ಷವೇ ತಳ್ಳಿಹಾಕಿತಾದರೂ, ಸಿಖVರ ನಾಡಿಗೆ ಸಮರ್ಥ ಸಾರಥಿ ಯಾರೆಂದು ಅದು ಹೇಳದೆ ಹೋಗಿದ್ದೂ ಹಿನ್ನಡೆಗೆ ಕಾರಣ.

Advertisement

5.ಕ್ಲೈಮ್ಯಾಕ್ಸ್‌ ತನಕ ಸಿಧು: ಬಿಜೆಪಿಯಲ್ಲಿ ತಟಸ್ಥರಾಗಿದ್ದ ನವಜೋತ್‌ ಸಿಂಗ್‌ ಸಿಧು ಅವರ ಆಗಮನವನ್ನೂ ಕೊನೆ ತನಕವೂ ಆಪ್‌ ನಿರೀಕ್ಷಿಸಿತ್ತು. ಸಿಧು ಜತೆ ಪತ್ನಿ ನವಜೋತ್‌ ಕೌರ್‌ ಮತ್ತು ಶಾಸಕ ಪರ್ಗಟ್‌ ಸಿಂಗ್‌ ಬರ್ತಾರೆಂಬ ಆಸೆಯೂ ಇತ್ತು. ಅವರು “ಕೈ’ವಶವಾಗಿದ್ದೂ ಹಿನ್ನಡೆ.

Advertisement

Udayavani is now on Telegram. Click here to join our channel and stay updated with the latest news.

Next