Advertisement

Mulur: ಮಾನಸಿಕ ಖಿನ್ನತೆಯಿಂದ ಮನನೊಂದು ಆತ್ಮಹತ್ಯೆ

09:33 PM Sep 25, 2024 | Team Udayavani |

ಕಾಪು: ಖಿನ್ನತೆಗೊಳಗಾಗಿ ಮನನೊಂದಿದ್ದ ಆರ್‌ಡಿ ಮತ್ತು ಪಿಗ್ಮಿ ಸಂಗ್ರಾಹಕ ಮೂಳೂರು ರಾಜಮನೆ ಕೆ. ಸುಭಾಶ್ಚಂದ್ರ ಮೂಳೂರು (70) ಅವರು ಬುಧವಾರ (ಸೆ. 25) ರಂದು ಮುಂಜಾನೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮನೆಯಲ್ಲಿ ಮಲಗಿದ್ದ ಅವರು ಬುಧವಾರ ಮುಂಜಾನೆ 4 ಗಂಟೆಗೆ ಎಂದಿನಂತೆ ವಾಕಿಂಗ್‌ಗೆ ತೆರಳಿದ್ದು, ಬೆಳಗ್ಗೆಯಾದರೂ ಮರಳಿ ಮನೆಗೆ ಬಾರದೆ ಇದ್ದುದರಿಂದ ಮನೆಯವರು ವಿವಿಧೆಡೆ ಹುಡುಕಾಡಿದ್ದರು. ಈ ವೇಳೆ ಮೂಳೂರು ಸಂಘದ ಬಳಿಯಲ್ಲಿರುವ ಸಹೋದರನ ಖಾಲಿ ಜಾಗದ ಬಾವಿಯ ಬಳಿ ಅವರ ಚಪ್ಪಲಿಗಳು ಪತ್ತೆಯಾಗಿದ್ದವು. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ಬಿಲ್ಲವ ಸಮಾಜದ ಒಂದನೇ ಗುರಿಕಾರರಾಗಿದ್ದ ಅವರು, ರಾಜಮನೆ ಕುಟುಂಬದ ದೈವದ ಆರಾಧಕರಾಗಿದ್ದರು. ಮೂಳೂರು ಬಿಲ್ಲವರ ಸಂಘದ ಅಧ್ಯಕ್ಷರಾಗಿ, ಮೂಳೂರು ಸರ್ವೇಶ್ವರ ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next