ಮುಂಬಯಿ, ಸೆ. 15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಲುಂಡ್ ಸ್ಥಳೀಯ ಕಚೇರಿ ಮುಲುಂಡ್ ಪೂರ್ವದ ನೀಲಂ ನಗರದಲ್ಲಿನ ಶ್ರೀ ವರ್ಧನ್ ಸಭಾಗೃ ಹದಲ್ಲಿ ಸೆ. 14ರಂದು ಅಪರಾಹ್ನ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವವು ಅದ್ದೂರಿಯಾಗಿ ನಡೆಯಿತು.
ಮುಲುಂಡ್ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ಧುರೀಣ ಸರ್ದರ್ ತಾರಾ ಸಿಂಗ್ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಧಾರ್ಮಿಕ ಕಾರ್ಯಕ್ರಮವಾಗಿ ಮಧ್ಯಾಹ್ನ ಬ್ರಹ್ಮಶ್ರೀ ನಾರಾಯಣ ಗುರುಪೂಜೆ ನಡೆಯಿತು. ಆನಂತರ ಶ್ರೀರಾಧಾಕೃಷ್ಣ ಶ್ರೀ ಶನೀಶ್ವರ ಮಂದಿರ ಡೊಂಬಿವಲಿ ಭಕ್ತವೃಂದದಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹಾಪೂಜೆ ನೆರವೇರಿತು. ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯೊಂದಿಗೆ ಗುರು ಜಯಂತ್ಯೋತ್ಸವ ಸಮಾಪನ ಕಂಡಿತು.
ಪ್ರಕಾಶ್ ಭಟ್ ಅವರ ಪೌರೋ ಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಬಿಲ್ಲವರ ಅಸೋಸಿಯೇಶನ್ ಮುಲುಂಡ್ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಕೆ. ಸುರೇಶ್ ಕುಮಾರ್ ಮತ್ತು ರತ್ನಾ ಸುರೇಶ್ ದಂಪತಿ ಪೂಜಾದಿಗಳ ಯಜಮಾನತ್ವ ವಹಿಸಿದ್ದರು.
ಈ ಶುಭಾವಸರದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಭಾರತ್ ಕೋ. ಆಪರೇಟಿವ್ ಬ್ಯಾಂಕ್ ಇದರ ನಿರ್ದೇಶಕ ನ್ಯಾಯವಾದಿ ರಾಜಾ ವಿ. ಸಾಲ್ಯಾನ್, ಬ್ಯಾಂಕ್‌ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್. ಕರ್ಕೇರ, ದಿನೇಶ್ ಬಿ. ಸಾಲ್ಯಾನ್, ನಿತ್ಯಾನಂದ ಎಸ್. ಕಿರೋಡಿಯನ್, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ. ಸುವರ್ಣ, ಸತೀಶ್ ಎಂ.ಬಂಗೇರ, ಪ್ರಭಾಕರ ಜಿ. ಪೂಜಾರಿ, ಮುಲುಂಡ್ ಸ್ಥಳೀಯ ಕಚೇರಿ ಕೇಂದ್ರ ಕಚೇರಿ ಪ್ರತಿನಿಧಿ ಶಕುಂತಳಾ ಕೆ. ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಅಭಿನಂದಿಸಿ ಗೌರವಿಸಿದರು.
ಮುಲುಂಡ್ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಕೆ. ಪಿ. ಸಂಜೀವ, ಉಪಾಧ್ಯಕ್ಷರುಗಳಾದ ರವಿ ಕೋಟ್ಯಾನ್ ಮತ್ತು ಶಂಕರ ಅಮೀನ್, ಗೌರವ ಕಾರ್ಯದರ್ಶಿ ಸತೀಶ್ ಎಂ. ಪೂಜಾರಿ, ಗೌರವ ಕೋಶಾಧಿಕಾರಿ ಶಂಕರ ಜೆ. ಪೂಜಾರಿ, ಜೊತೆ ಕೋಶಾಧಿಕಾರಿ ಶ್ರೀಧರ ಪೂಜಾರಿ ಹಾಲಿ-ಮಾಜಿ ಪದಾಧಿಕಾರಿಗಳು ಸೇರಿದಂತೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಮುಖ್ಯಸ್ಥರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಲಾ ಸೌರಭ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಕೆ. ಸುರೇಶ್ ಕುಮಾರ್ ಸ್ವಾಗತಿಸಿದರು. ಸತೀಶ್ ಎಂ. ಪೂಜಾರಿ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್