Advertisement
ಜೂ. 17ರಂದು ಮುಲುಂಡ್ ಪೂರ್ವದ ಮಹಾತೆ¾ ಫುಲೆ ರೋಡ್, ಹೊಟೇಲ್ ಬಾನ್ಸೂರಿ¿ ಸಮೀಪದ ಗೀವಾಲಾ ಬಿಲ್ಡಿಂಗ್‌ನಲ್ಲಿರುವ ಸಿಂಫೋನಿ ಫ್ತೈಡ್ ಸಭಾಗೃಹದಲ್ಲಿ ನಡೆದ ಮುಲುಂಡ್ ಬಂಟ್ಸ್‌ನ ವಾರ್ಷಿಕ ಶೈಕ್ಷಣಿಕ ನೆರವು ಮತ್ತು ಶೈಕ್ಷಣಿಕ ದತ್ತು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯಲು ಅನೇಕ ಅವಕಾಶವಿದೆ. ಅದರ ಸದುಪಯೋಗವನ್ನು ಪಡೆದುಕೊಂಡು ಜೀವನದಲ್ಲಿ ಸಾಧನೆಯನ್ನು ಮಾಡಬೇಕು. ಪ್ರಸ್ತುತ ವಿದ್ಯೆಗಾಗಿ ಸರಕಾರ ಮತ್ತು ಹಲವು ಸಂಘ- ಸಂಸ್ಥೆಗಳು ಮಹತ್ವವನ್ನು ನೀಡುತ್ತಿವೆ. ಮುಲುಂಡ್ ಬಂಟ್ಸ್ ಸ್ಥಾಪನೆಯಾದ ದಿನದಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ನಮ್ಮ ಸದಸ್ಯರು, ಪರಿಸರದ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡುವುದರಿಂದ ಉತ್ತಮ ರೀತಿಯಲ್ಲಿ ಶೈಕ್ಷಣಿಕ ನೆರವು ನೀಡಲು ನಮಗೆ ಸಹಾಯವಾಗುತ್ತದೆ. ಇಂದು ನಮ್ಮಲ್ಲಿಗೆ ಅತಿಥಿಗಳಾಗಿ ಆಗಮಿಸಿದ ಮಹಾನೀಯರು ವಿದ್ಯಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ವರಾಗಿದ್ದಾರೆ. ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಬೇಕು. ನಮ್ಮ ಸಂಸ್ಕೃತಿ ಯಲ್ಲಿ ಗುರುಗಳೇ ದೇವರು ಎಂಬ ನಂಬಿಕೆಯಿದೆ. ಈ ಕಾರಣದಿಂದಲೇ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಇಬ್ಬರು ಸಾಧಕರನ್ನು ಅತಿಥಿಗಳಾಗಿ ಆಹ್ವಾನಿಸಿದ್ದೇವೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
Related Articles
ಇನ್ನೋರ್ವೆ ಅತಿಥಿ ಭಾರತ್ ಕಾಲೇಜ್ ಆಫ್ ಎಂಜಿನಿಯರಿಂಗ್ ಇದರ ಪ್ರೊ| ಶುಭಲಕ್ಷ್ಮೀ ಹೆಗ್ಡೆ ಇವರು ಮಾತನಾಡಿ, ಯಾವುದೇ ಸಂಸ್ಥೆಯಾದರೂ ಕೂಡಾ ಅದು ವಿದ್ಯೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ವಿದ್ಯಾದಾನವೇ ಮುಖ್ಯ ಸೇವೆಯಾಗಿರಬೇಕು. ಮುಲುಂಡ್ ಬಂಟ್ಸ್ ಮಾಡುತ್ತಿರುವ ಈ ಸಾಧನೆ ಅಭಿನಂದನೀಯವಾಗಿದೆ. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದಾಗ ನಾಳೆ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಯುವ ಜನಾಂಗವು ಕ್ರಿಯಾಶೀಲರಾಗಿರಬೇಕು. ಹಾಗೂ ಸಿಕ್ಕ ಒಳ್ಳೆಯ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಅದುವೇ ಮುಂದೆ ಹಲವು ಸಾಧನೆಗಳನ್ನು ಮಾಡಲು ದಾರಿದೀಪವಾಗುತ್ತದೆ. ನನ್ನ ಸಂಚಾಲಕತ್ವದ ಶೈಕ್ಷಣಿಕ ಸಂಸ್ಥೆಯು ಬಡ ಮಕ್ಕಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
Advertisement
ಸಂಸ್ಥೆಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ರತ್ನಾಕರ ವೈ. ಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ದಾನಿಗಳ ಸಹಕಾರದಿಂದ ಇಂದು ನೀಡುತ್ತಿರುವ ವಿದ್ಯಾರ್ಥಿ ವೇತನದ ಸಹಾಯವನ್ನು ಸಮಾಜದ ಮಕ್ಕಳು ಪಡೆದು ಆದರ್ಶ ಪ್ರಜೆಗಳಾಗಿ ಬಾಳಬೇಕು. ಸಂಸ್ಥೆಯ ಇಂತಹ ಕಾರ್ಯಯೋಜನೆಗಳಿಗೆ ದಾನಿಗಳ, ಸದಸ್ಯ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಾಗಿ ಭಾಗವಹಿಸುವಂತೆ ಪಾಲಕರು-ಪೋಷಕರು ಅವರನ್ನು ಪ್ರೇರೇಪಿಸಬೇಕು. ಇಂದು ವಿದ್ಯಾರ್ಥಿ ವೇತನ ಪಡೆದ ಮಕ್ಕಳು ಭವಿಷ್ಯದಲ್ಲಿ ಸಂಘದ ಋಣವನ್ನು ತೀರಿಸುವುದಲ್ಲದೆ, ಇತರ ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಬೇಕು ಎಂದರು.
ಮುಲುಂಡ್ ಬಂಟ್ಸ್‌ನ ಉಪಾಧ್ಯಕ್ಷ ವಸಂತ್ ಎನ್. ಶೆಟ್ಟಿ ಪಲಿಮಾರು ಅವರು ಸ್ವಾಗತಿಸಿದರು. ಜೊತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಶೇಖರ್ ಶೆಟ್ಟಿ ಇವರು ಅತಿಥಿಗಳನ್ನು ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎನ್. ಶೆಟ್ಟಿ ವಂದಿಸಿದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಡಾ| ಸತ್ಯಪ್ರಕಾಶ್ ಶೆಟ್ಟಿ, ಸುರೇಶ್ ಬಿ. ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಯಂತಿ ಶೇಖರ ಶೆಟ್ಟಿ ಪ್ರಾರ್ಥನೆಗೈದರು. ಜಯ ಸೂಡಾ ಅವರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಸುಧಾಕರ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮೋಹಿತ್ ಎಂ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು. ಪರಿಸರದ ಸಮಾಜ ಬಾಂಧವರ ಮಕ್ಕಳು, ಪಾಲಕ-ಪೋಷಕರು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮುಲುಂಡ್ ಪರಿಸರದ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಮಾರು ರೂ. ಆರು ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ, ಶೈಕ್ಷಣಿಕ ನೆರವು ವಿತರಿಸಲಾಯಿತು. ಅಲ್ಲದೆ ಗಣ್ಯರ ಉಪಸ್ಥಿತಿಯಲ್ಲಿ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು. ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿಮಾ ಯೋಜನೆಯನ್ನು ಇದೇ ಸಂದರ್ಭದಲ್ಲಿ ಚಾಲನೆಗೊಳಿಸಲಾಯಿತು.
ಚಿತ್ರ-ವರದಿ : ಸುಭಾಷ್ ಶಿರಿಯಾ