ಮುಂಬಯಿ, ನ. 29: ಮುಲುಂಡ್ ಪರಿಸರದ ಪ್ರತಿಷ್ಠಿತ ಜಾತೀಯ ಸಂಸ್ಥೆಯಾದ ಮುಲುಂಡ್ ಬಂಟ್ಸ್ ಇದರ ಮಹಿಳಾ ವಿಭಾಗ ಮತ್ತು ಮುಲುಂಡ್ ಬಂಟ್ಸ್‌ನ ಪ್ರತಿಷ್ಠಿತ ಶಿವಾನಿ ನರ್ಸಿಂಗ್ ಹೋಮ್ ಅವರ ಜಂಟಿ ಆಶ್ರಯದಲ್ಲಿ ನ. 24ರಂದು ಎಲ್‌ಬಿಎಸ್ ಮಾರ್ಗದಲ್ಲಿರುವ ಶಿವಾನಿ ನರ್ಸಿಂಗ್ ಹೋಮ್‌ನಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಯಿತು.
ಶಿವಾನಿ ನರ್ಸಿಂಗ್ ಹೋಮ್‌ನ ಡಾ| ಸತ್ಯಪ್ರಕಾಶ್ ಶೆಟ್ಟಿ ಮತ್ತು ಡಾ| ಸಂಗೀತಾ ಸತ್ಯಪ್ರಕಾಶ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ಶಿಬಿರವನ್ನು ಬೆಳಗ್ಗೆ ದೀಪಪ್ರ ಜ್ವಲನೆಯೊಂದಿಗೆ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಡಾ| ಸತ್ಯಪ್ರಕಾಶ್ ಶೆಟ್ಟಿ, ಡಾ| ಸಂಗೀತಾ ಎಸ್. ಶೆಟ್ಟಿ, ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್ ಎನ್. ಶೆಟ್ಟಿ, ಉಪಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಕಾರ್ಯದರ್ಶಿ ರತ್ನಾಕರ ವೈ. ಶೆಟ್ಟಿ, ಕೋಶಾಧಿಕಾರಿ ಕೃಷ್ಣ ಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ, ಮಾಜಿ ಅಧ್ಯಕ್ಷರುಗಳು ಹಾಗೂ ವಿಶ್ವಸ್ತರುಗಳಾದ, ಸುರೇಶ್ ಬಿ. ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಆರ್. ಕೆ. ಚೌಟ, ಉಪ ಕಾರ್ಯಾಧ್ಯಕ್ಷೆ ರತ್ನಾ ಎನ್. ಶೆಟ್ಟಿ,ಗೌರವ ಕಾರ್ಯದರ್ಶಿ ಪೂರ್ಣಿಮಾ ಎಚ್. ಶೆಟ್ಟಿ, ಕಾರ್ಯದರ್ಶಿ ಶಶಿಪ್ರಭಾ ಕೆ. ಶೆಟ್ಟಿ, ಕೋಶಾಧಿಕಾರಿ ಸುಷ್ಮಾ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಚಂದ್ರಲತಾ ಎಸ್. ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಪ್ರಭಾ ಬಿ. ಶೆಟ್ಟಿ, ಮಮತಾ ಎಂ. ಶೆಟ್ಟಿ, ಐಟಿ ವಿಭಾಗದ ಕಾರ್ಯಾಧ್ಯಕ್ಷ ಹೇಮಂತ್ ಶೆಟ್ಟಿ ಹಾಗೂ ಇತರ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಪರಿಸರದ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಶಿಬಿರದಲ್ಲಿ ಡಾ| ಉಮಾ ಚಿಲ್ಲೈ ಶೇಟಿ, ಡಾ| ಅನೂಪ್ ಶಿವಸತ್, ಡಾ| ನಿಲೇಶ್ ಶಾ, ಡಾ| ಪ್ರಜಾಪತಿ ಮೊದಲಾದವರು ಶಿಬಿದಲ್ಲಿ ಉಪಸ್ಥಿತರಿದ್ದು ಶಿಬಿರಾರ್ಥಿಗಳನ್ನು ಪರೀಕ್ಷಿಸಿದರು. ಶಿವಾನಿ ನರ್ಸಿಂಗ್ ಹೋಮ್‌ನ ಡಾ| ಸತ್ಯಪ್ರಕಾಶ್ ಶೆಟ್ಟಿ ಮತ್ತು ಡಾ| ಸಂಗೀತಾ ಎಸ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಈ ವೈದ್ಯಕೀಯ ಶಿಬಿರದಲ್ಲಿ ಪಿ.ಎಸ್‌ಎ. ಪ್ರಾಸ್ಟೇಟ್ ಸೇರಿದಂತೆ ಎಲ್ಲ ರೀತಿಯ ರಕ್ತಪರೀಕ್ಷೆ,
ಮಹಿಳೆಯರಿಗಾಗಿ ಡೇಕ್ಸಾ ಮೂಳೆ ಸಾಂದ್ರತೆ, ಮೊಮೋಗ್ರಾ, ಸೊನೋಗ್ರಾ, ಪುರುಷರಿಗೆ ಮತ್ತು ಮಹಿಳೆಯರಿಗಾಗಿ ಸಿಟಿ ಎಂಜೋಗ್ರಾ ಮತ್ತು ಮಹಿಳೆಯರಿಗಾಗಿ ಪ್ಯಾಪ್ ಸ್ಮಿಯಾರ್ ಇತ್ಯಾದಿ ಸೇರಿದಂತೆ ವಯೋಮಿತಿಗೆಅನುಗುಣವಾಗಿ ಅನೇಕ ರೀತಿಯ ಅಗತ್ಯಚಿಕಿತ್ಸೆಯ ಸೌಲಭ್ಯವನ್ನು ರಿಯಾಯತಿ ದರದಲ್ಲಿ ಒದಗಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.
–ಚಿತ್ರ-ವರದಿ: ಸುಭಾಷ್ ಶಿರಿಯಾ