Advertisement

2 ತಾಲೂಕಿಗೆ ವರವಾದ ಬಹುಗ್ರಾಮ ಯೋಜನೆ

12:01 PM May 03, 2019 | pallavi |

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದ್ದರಿಂದ ಈ ತಾಲೂಕುಗಳಲ್ಲಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ತಲೆದೋರಿಲ್ಲ. ಆದರೆ ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

Advertisement

ಮಳೆ ಕೊರತೆ ಪರಿಣಾಮ ಹನೂರು ಭಾಗದ ಸಾಕಷ್ಟು ಗ್ರಾಮಗಳಲ್ಲಿ ಅಂತರ್ಜಲ ಕ್ಷೀಣಿಸಿದ್ದು, ಕುಡಿ ವ ನೀರಿಗೆ ಸಮಸ್ಯೆ ಉಂಟಾಗಿದೆ. ಅರಣ್ಯದೊಳಗೆ, ಅರಣ್ಯದಂಚಿನಲ್ಲಿರುವ ಕೆಲ ಗ್ರಾಮಗಳಲ್ಲಿ ನೀರಿಗಾಗಿ ಜನರು ಪರಿತಾಪ ಪಡುವಂತಾಗಿದೆ.

ದೂರದೃಷ್ಟಿ ಫ‌ಲ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್‌. ಮಹದೇವಪ್ರಸಾದ್‌ ಅವರ ದೂರದೃಷ್ಟಿಯ ಫ‌ಲವಾಗಿ, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕಿನ 297 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಯಿತು. ಕಬಿನಿ ನದಿ ಮೂಲದಿಂದ ತಾಲೂಕಿನ ಹಲವು ಗ್ರಾಮಗಳಿಗೆ ನೀರೊದಗಿಸಲಾಯಿತು. 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯನ್ನು ಉದ್ಘಾಟಿಸಿದರು. ಎರಡು ತಾಲೂಕಿನ ಅನೇಕ ಗ್ರಾಮಗಳಲ್ಲಿ ಬೇಸಿಗೆ ಬಂದರೂ ನೀರಿನ ಅಭಾವವಿಲ್ಲದಂತೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ತಾಂತ್ರಿಕ ಸಮಸ್ಯೆಯಿಂದ ನೀರಿಲ್ಲ: ಜಿಲ್ಲೆಯ ಕೊಳ್ಳೇ ಗಾಲ, ಹನೂರು ತಾಲೂಕಿಗೂ ಯೋಜನೆ ಜಾರಿ ಗೊಳಿಸಲು ಸರ್ಕಾರ ಮುಂದಾಗಿದೆ. ಆದರೆ ಯೋಜನೆ ಕಾರ್ಯಗತವಾಗುವವರೆಗೆ ನೀರಿಗೆ ಈ ಜನತೆ ಬವಣೆ ಅನುಭವಿಸಬೇಕಾಗಿದೆ. ಅಲ್ಲದೇ ಬಹುಗ್ರಾಮ ಯೋಜನೆಗೊಳಪಟ್ಟಿದ್ದರೂ ಕೆಲವು ಬೆರಳೆಣಿಕೆಯಷ್ಟು ಹಳ್ಳಿಗಳಲ್ಲಿ ಪೈಪ್‌ಲೈನ್‌ ಇತ್ಯಾದಿ ತಾಂತ್ರಿಕ ಸಮಸ್ಯೆ ಗಳಿಂದ ನೀರಿನ ಸಮಸ್ಯೆ ಉಂಟಾಗಬಹುದೆಂದು ನೀರು ನೈರ್ಮಲ್ಯ ಇಲಾಖೆ ತಿಳಿಸಿದೆ.

94 ಗ್ರಾಮಗಳಲ್ಲಿ ನೀರಿಗೆ ಪರಿತಾಪ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದಾದ 94 ಗ್ರಾಮಗಳ ಹೆಸರನ್ನು ಸಿದ್ಧಪಡಿಸಿದೆ. ಇದರಲ್ಲಿ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನ ಗ್ರಾಮಗಳೂ ಇವೆ. ಮಳೆ ಅಭಾವವೇನಾದರೂ ಉಂಟಾದರೆ ಈ 94 ಗ್ರಾಮಗಳಲ್ಲಿ ನೀರಿಗೆ ಅಭಾವ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಕೆಲವು ಗ್ರಾಮಗಳೆಂದರೆ ಚಾಮರಾಜನಗರ ತಾಲೂಕಿನ ಹರವೆ, ಶಿವಪುರ, ಕೆ.ಕೆ. ಹುಂಡಿ, ಯಡಪುರ, ಮೂಡಲ ಅಗ್ರಹಾರ, ಹುಲ್ಲೇಪುರ, ಕರಿಯನಕಟ್ಟೆ, ಹೊಂಗನೂರು, ಕಾವುದವಾಡಿ. ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ, ತೊಂಡವಾಡಿ, ಬೆಳವಾಡಿ ಹಿರೀಕಾಟಿ, ರಾಘವಾಪುರ, ಹನೂರು ತಾಲೂಕಿನ ಮಹದೇಶ್ವರ ಬೆಟ್ಟ, ವಡ್ಡರದೊಡ್ಡಿ, ಬಂಡಳ್ಳಿ, ಜಲ್ಲಿಪಾಳ್ಯ, ಹುತ್ತೂರು, ಕೌದಳ್ಳಿ, ನಾಲ್ರೋಡ್‌, ಬೈರನತ್ತ, ಕಳ್ಳಿದೊಡ್ಡಿ, ಪುದೂರು, ಕುರಟ್ಟಿ ಹೊಸೂರು. ಯಳಂದೂರು ತಾಲೂಕಿನ ಬಿಳಿಗಿರಿ ರಂಗನಬೆಟ್ಟ, ವಡಗೆರೆ, ಹೊನ್ನೂರು, ಯರಗಂಬಳ್ಳಿ ಹಾಗೂ ಮೆಲ್ಲಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಯಾಗಬಹುದೆಂದು ವರದಿ ಸಲ್ಲಿಸಲಾಗಿದೆ.

Advertisement

ಅನುದಾನ ಬಿಡುಗಡೆ: ಇದಲ್ಲದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದರೆ ಅದರ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಭಾವ ಪರಿಹಾರ ನಿಧಿಯಡಿ ಈಗಾಗಲೇ ಹನೂರು ಸೇರಿದಂತೆ ಕೊಳ್ಳೇಗಾಲ ತಾಲೂಕು ಹಾಗೂ ಯಳಂದೂರು ತಾಲೂಕಿಗೆ ತಲಾ 50 ಲಕ್ಷ ರೂ. ಹಾಗೂ ಚಾ.ನಗರ, ಗುಂಡ್ಲುಪೇಟೆ ತಾಲೂಕಿಗೆ ತಲಾ 25 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನದಲ್ಲಿ ಕೊಳಬೆಬಾವಿ ಮರುಪೂರಣ, ಪೈಪ್‌ಲೈನ್‌ ಅಳವಡಿಕೆ, ದುರಸ್ತಿ ಕಾರ್ಯ ಸೇರಿದಂತೆ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ಜಿಲ್ಲೆಯಲ್ಲಿ 2,646 ಕೊಳವೆಬಾವಿ ಸ್ಥಗಿತ
ಚಾಮರಾಜನಗರ: ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 902 ಗ್ರಾಮಗಳಿದ್ದು, ನದಿ ಮೂಲ, ಕೊಳವೆಬಾವಿ, ಓವರ್‌ ಹೆಡ್‌ ಟ್ಯಾಂಕ್‌ ಹಾಗೂ ಮಿನಿ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 6962 ಸಾರ್ವಜನಿಕ ಕೊಳವೆಬಾವಿಗಳಿದ್ದು, ಇವುಗಳಲ್ಲಿ 4316 ಕೊಳವೆಬಾವಿಗಳು ಮಾತ್ರ ಚಾಲ್ತಿಯಲ್ಲಿವೆ. ಇನ್ನುಳಿದ 2646 ಕೊಳವೆಬಾವಿಗಳು ಕೆಟ್ಟಿವೆ. ಸಣ್ಣ ನೀರು ಸಬರಾಜು ಘಟಕಗಳು ಒಟ್ಟು 3060 ಇದ್ದು, ಈ ಪೈಕಿ 2418 ಘಟಕಗಳು ಚಾಲ್ತಿಯಲ್ಲಿವೆ. ಉಳಿದ 642 ಸ್ಥಗಿತಗೊಂಡಿವೆ. ಕೊಳವೆ ನೀರು ಸರಬರಾಜು ಘಟಕಗಳು ಒಟ್ಟು 11,285 ಇದ್ದು, ಈ ಪೈಕಿ 3534 ಸ್ಥಗಿತಗೊಂಡಿವೆ. ಉಳಿದ 7751 ಚಾಲ್ತಿಯಲ್ಲಿವೆ.
ಬೋರ್‌ವೆಲ್ ಕೊರೆಸಲು ಕ್ರಮ: ಡೀಸಿ ಕಾವೇರಿ
ಚಾಮರಾಜನಗರ:
ಜಿಲ್ಲೆಯಲ್ಲಿ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ನಮಸ್ಯೆ ಇಲ್ಲ. ಒಂದು ವೇಳೆ ಮಳೆಯ ಅಭಾವ ಉಂಟಾದರೆ ತೊಂದರೆ ತಲೆದೋರಬಹುದೆಂದು ಮುಂಜಾ ಗ್ರತಾ ಕ್ರಮವಾಗಿ 91 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯಿಂದ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಾವೇರಿ ಉದಯವಾಣಿಗೆ ಮಾಹಿತಿ ನೀಡಿದರು.

ಸಮಸ್ಯಾತ್ಮಕವೆಂದು ಗುರುತಿಸಲಾದ ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್‌ ಮೂಲಕವೂ ನೀರು ಸರಬರಾಜು ಮಾಡಲು ಸನ್ನದ್ಧಗೊಳಿಸಲಾಗಿದೆ. ಮಹದೇಶ್ವರ ಬೆಟ್ಟದ ಮೆದಗನಾಣೆ ಗ್ರಾಮದಲ್ಲಿ ಬೋರ್‌ ಕೊರೆಯಲು ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿದೆ. ಅಲ್ಲಿ ಬೋರ್‌ವೆಲ್ ಲಾರಿ ಹೋಗಲು ಸರಿಯಾದ ರಸ್ತೆಯಿಲ್ಲ. ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಹದೇಶ್ವರ ಬೆಟ್ಟದ ನಾಗಮಲೆಯಲ್ಲೂ ಕೂಡ ಬೋರ್‌ ವೆಲ್ ಕೊರೆಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next