ಕಾಬೂಲ್: ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ದಾಳಿ ನಡೆಸಿದ ಪರಿಣಾಮ ಸುಮಾರು 7 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ (ಏಪ್ರಿಲ್ 19) ಅಫ್ಘಾನಿಸ್ತಾನದಲ್ಲಿ ನಡೆದಿರುವುದಾಗಿ ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ಗಾಗಿ ಪೊಲೀಸರ ಶೋಧ; ಆರೋಪಿಗಳು ಕೇಂದ್ರಕಾರಾಗೃಹಕ್ಕೆ ಶಿಫ್ಟ್
ಸುನ್ನಿ ಸಮುದಾಯದ ಉಗ್ರರು ಹೈಸ್ಕೂಲ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ಪ್ರದೇಶದಲ್ಲಿ ಒಟ್ಟು ಮೂರು ಬಾಂಬ್ ಸ್ಫೋಟಗೊಂಡಿದ್ದು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಕಾಬೂಲ್ ಕಮಾಂಡರ್ ವಕ್ತಾರ ಖಾಲೀದ್ ಝರ್ದಾನ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಈ ಪ್ರದೇಶದ ಸುತ್ತಮುತ್ತ ಶಿಯಾ ಹಝಾರಾ ಸಮುದಾಯದವರು ವಾಸಿಸುತ್ತಿದ್ದು, ಸಂಪ್ರದಾಯವಾದಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಸುನ್ನಿ ಉಗ್ರರ ಸಂಘಟನೆ ದಾಳಿ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ಏಳು ವಿದ್ಯಾರ್ಥಿಗಳು ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದು, ಕನಿಷ್ಠ ಆರು ಜನರು ಬಲಿಯಾಗಿರುವುದಾಗಿ ಹೆಸರು ಹೇಳಲಿಚ್ಚಿಸದ ಆಸ್ಪತ್ರೆಯ ಮುಖ್ಯಸ್ಥರೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.