Advertisement
ಶಕ್ತಿ ದೇಹದ ತುಂಬ ಸರಾಗವಾಗಿ ಹರಿಯಬೇಕು ಅದು ಯಾವುದಾದರೂ ಒಂದು ಕಡೆ ಸ್ಥಗಿತಗೊಂಡರೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಹೀಗೆ ನೋವು ಮತ್ತು ಅನಾರೋಗ್ಯಕ್ಕೆ ಅತ್ಯಂತ ತೆಳುವಾದ ಸೂಜಿಯಿಂದ ನೋವಿರುವ ಜಾಗಕ್ಕೆ ಸ್ವಲ್ಪ ಹತ್ತಿರದಲ್ಲೆ ನಿಖರವಾಗಿ ನರ ಅಥವಾ ಚರ್ಮಕ್ಕೆ ಚುಚ್ಚುವ ಮೂಲಕ ಕಾಯಿಲೆ ಗುಣಪಡಿಸುವಂತಹ ಒಂದು ವಿಶಿಷ್ಟವಾದ ವೈದ್ಯ ಪದ್ದತಿ. ಈ ಪದ್ಧತಿಯ ಮೂಲಕ ಆಕ್ಯುಪಂಕ್ಚರ್ ತಜ್ಞರು ತಲೆನೋವು, ಬೆನ್ನು ನೋವು, ಸಂಧಿವಾತ, ಪಾರ್ಶ್ವವಾಯು, ಮುಟ್ಟಿನ ಸೆಳೆತ, ಸೌಂದರ್ಯವರ್ಧಕ ಸಮಸ್ಯೆ, ಚರ್ಮದ ಸಮಸ್ಯ ಹೀಗೆ ಅನೇಕ ಕಾಯಿಲೆಗಳನ್ನು ಸರಳವಾಗಿ ಗುಣಪಡಿಸಬಹುದಾಗಿದೆ.
ಆಕ್ಯುಪಂಕ್ಚರ್ ವೃತ್ತಿ ಬಯಸುವವರು ಪಿಯಸಿ ಮುಗಿಸಿದವರಿಗೆ ಒಂದು ವರ್ಷದ ಡಿಪ್ಲೋಮಾ ಮತ್ತು ಮೂರು ವರ್ಷದ ಡಿಗ್ರಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೆಡಿಕಲ್‌ಗೆ ಸಂಬಂಧಿಸಿದ ಯಾವುದೇ ಬ್ಯಾಚುಲರ್ ಡಿಗ್ರಿ (ಎಂಬಿಬಿಎಸ್, ಬಿಎಚ್‌ಎಂ.ಎಸ್, ಬಿಎಎಂಸ್, ಬಿಯುಎಂಎಸ್ ಇತ್ಯಾದಿ) ಮುಗಿಸಿದವರು ಎರಡು ವರ್ಷದ ಮಾಸ್ಟರ್ ಡಿಗ್ರಿ ಮಾಡುಬಹುದಾಗಿದೆ. ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರಿಗೆ ವಿಪುಲ ಅವಕಾಶಗಳು ಕಾದಿವೆ. ಆಕ್ಯುಪಂಕ್ಚರ್ ಶಿಕ್ಷಣ ಸಂಸ್ಥೆಗಳು
ಇಂಡಿಯನ್ ಅಕಾಡೆಮಿ ಆಫ್ ಆಕ್ಯುಪಂಕ್ಚರ್ ಸೈನ್ಸ್, ಔರಂಗಾಬಾದ್, ಇಂಡಿಯನ್ ಬೋಡ್ ಆಫ್ ಆಲ್ಟರ್‌ನೇಟಿವ್ ಮೆಡಿಸಿನ್ಸ್, ಕೊಲ್ಕತ್ತ, ಇಂದಿರಾ ಗಾಂಧಿ ನ್ಯಾಷನಲ್ ಒಪನ್ ಯೂನಿವರ್ಸಿಟಿ, ಬಿಹಾರ್ ಆಕ್ಯುಪಂಕ್ಚರ್ ಯೋಗ ಕಾಲೇಜ್, ಪಾಟ್ನಾ, ಆಲ್ಟರ್‌ನೇಟಿವ್ ಮೆಡಿಸಿನ್ ಕಾಲೇಜ್, ಕೊಯಮತ್ತೂರು. ಆತ್ಮ ಆಕ್ಯುಪಂಕ್ಚರ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್, ಸಲೆಮಾ, ತಮಿಳುನಾಡು.
Related Articles
ಆಕ್ಯುಪಂಕ್ಚರ್ ತಜ್ಞರಾಗಬೇಕಾದರೆ ಕೆಲವೊಂದು ಸಾಮಾನ್ಯ ಅರ್ಹತತೆ ಮತ್ತು ಕೌಶಲಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಉತ್ತಮ ಅಕ್ಯುಪಂಕ್ಚರ್ ನಾಗಲು ಸಾಧ್ಯ. ಅವುಗಳಲ್ಲಿ ಕೆಲವೊಂದು ಗುರುತಿಸುವುದಾದರೆ, ಈ ವೃತ್ತಿ ಆಯ್ಕೆ ಮಾಡಿಕೊಳ್ಳುವರಿಗೆ ಈ ಕೋರ್ಸ್‌ನ ಬಗ್ಗೆ ತೀವ್ರ ಆಸಕ್ತಿಯನ್ನು ಹೊಂದುವುದು ಅಗತ್ಯ. ರೋಗಿಗಳೊಂದಿಗೆ ಉತ್ತಮ ಸಂವಹನ, ಸರಿಯಾಗಿ ಕೇಳುವ ಸಾಮರ್ಥ್ಯ ಇರಬೇಕು. ತಾಳ್ಮೆ ಇರಬೇಕು, ಸೂಕ್ಷ್ಮತೆಯನ್ನು ಅರಿಯುವ ಸಾಮರ್ಥ್ಯ ಜತೆಗೆ ಕೈ ಮತ್ತು ಕಣ್ಣಿನ ಉತ್ತಮ ಸಮನ್ವಯತೆ ಸಾಧಿಸುವ ಗುಣ ಇರಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
Advertisement
- ಶಿವಾನಂದ್ ಎಚ್.