ನವದೆಹಲಿ: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ಗೆ ಹೊಸ ಸ್ಪರ್ಶ ನೀಡಿರುವ ಅದರ ಮಾತೃಸಂಸ್ಥೆ ಫೇಸ್‌ಬುಕ್, ಏಕಕಾಲದಲ್ಲಿ ವಿವಿಧ ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ವಾಟ್ಸ್‌ಆ್ಯಪ್ ನಿರ್ವಹಿಸುವ ಹೊಸ ಫೀಚರ್ ನೀಡಿದೆ. ಅಂದರೆ, ಒಂದು ಮೊಬೈಲ್, ಲ್ಯಾಪ್‌ಟಾಪ್, ಒಂದು ಟ್ಯಾಬ್‌ನಲ್ಲಿ ಏಕಕಾಲದಲ್ಲಿ ನೀವು ವಾಟ್ಸ್‌ಆ್ಯಪ್ ಖಾತೆಯನ್ನು ನಿರ್ವಹಿಸಬಹುದಾಗಿದೆ.
ಆದರೆ, ಇಲ್ಲೊಂದು ಮಿತಿ ವಿಧಿಸಲಾಗಿದೆ. ಮೊಬೈಲ್‌ನಲ್ಲಿರುವ ವಾಟ್ಸ್‌ಆ್ಯಪ್ ಖಾತೆಯನ್ನು ಮತ್ತೂಂದು ಮೊಬೈಲ್‌ನಲ್ಲಿ ನೋಡುವ ಹಾಗಿಲ್ಲ. ಕೇವಲ ಲ್ಯಾಪ್‌ಟಾಪ್, ಟ್ಯಾಬ್‌ಗ ಮಾತ್ರ ಆ ಖಾತೆಗೆ ಲಾಗಿನ್ ಆಗಿ ಖಾತೆಯನ್ನು ನಿರ್ವಹಿಸಬಹುದು. ಎರಡು ಮೊಬೈಲ್‌ಗಳಲ್ಲಿ ಒಂದೇ ವಾಟ್ಸ್‌ಆ್ಯಪ್ ಖಾತೆಯನ್ನು ನಿರ್ವಹಿಸುವ ಹಾಗಿಲ್ಲ.
ವ್ಯತ್ಸಾಸ-ಅನುಕೂಲ:
ಹಾಗೆ ನೋಡಿದರೆ, ವಾಟ್ಸ್‌ಆ್ಯಪ್‌ನ “ಮಲ್ಟಿ ಡಿವೈಸ್ ಆಕ್ಸೆಸ್’ ಸೌಲಭ್ಯ ಬಂದಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೇ, ಮೊಬೈಲ್‌ನಲ್ಲಿರುವ ವಾಟ್ಸ್‌ಆ್ಯಪ್ ಖಾತೆಯನ್ನು ಡೆಸ್ಕ್ಟಾಪ್ ಅಥವಾ ಲ್ಯಾಪ್‌ನಲ್ಲಿ ಏಕಕಾಲದಲ್ಲಿ ಬಳಸುವ ಅನುಕೂಲವನ್ನು ಕಂಪನಿ ಕಲ್ಪಿಸಿತ್ತು. ಆದರೆ, ಆ ರೀತಿಯ ಸಂಪರ್ಕ ಸಾಧಿಸಲು ನಿಮ್ಮ ಮೊಬೈಲ್‌ನಲ್ಲಿ ಹಾಗೂ ಡೆಸ್ಕ್ಟಾಪ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಂಟ್ ಸಂಪರ್ಕ ಇರಲೇಬೇಕಿತ್ತು.
ಆದರೆ, ಈಗ ಕೊಟ್ಟಿರುವ ಹೊಸ ಸೌಲಭ್ಯದಲ್ಲಿ ಇಂಟರ್ನೆಂಟ್ ಸಂಪರ್ಕ ಇಲ್ಲದೆಯೂ ನಿಮ್ಮ ಮೊಬೈಲ್‌ನಲ್ಲಿನ ವಾಟ್ಸ್‌ಆ್ಯಪ್ ಖಾತೆಯನ್ನು ಲ್ಯಾಪ್‌ಟಾಪ್, ಟ್ಯಾಬ್‌ಗಳಿಗೆ ವಿಸ್ತರಿಸಬಹುದು. ಇದರಿಂದ ನಿಮ್ಮ ಫೋನ್ ಬ್ಯಾಟರಿ ಡೆಡ್ ಆಗಿದ್ದರೂ ಬೇರೆ ಪರಿಕರಗಳಿಂದ ಖಾತೆಯನ್ನು ನಿರ್ವಹಿಸುವ ಅನುಕೂಲ ಸಿಗಲಿದೆ.