Advertisement
ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಧಾರಾಳವಾಗಿದ್ದು ಇದು ದೇಹಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಪೊಟಾಶಿಯಂ ಹಾಗೂ ಫೈಬರ್‌ನ ಅಂಶವೂ ಇದರಲ್ಲಿದೆ.
ಪೇರಳೆ ಹಣ್ಣಿನ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯವಾಗುತ್ತದೆ. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಪೇರಳೆ ಹಣ್ಣು ಸಹಕಾರಿ. ಪೇರಳೆ ಹಣ್ಣನ್ನು ದಿನನಿತ್ಯ ಸೇವಿಸುವುದರಿಂದ ಹಾಗೂ ಪೇರಳೆ ಎಲೆಯ ಕಷಾಯವನ್ನು ಸತತವಾಗಿ ಸೇವಿಸುವುದು ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಪೇರಳೆ ಎಲೆಯ ಚಿಗುರನ್ನು ಪ್ರತಿನಿತ್ಯ ಬೆಳಗ್ಗೆ ಎರಡರಿಂದ ಮೂರು ಸೇವಿಸುವುದರಿಂದ ದೇಹದಲ್ಲಿನ ಪಿತ್ತ ಕಡಿಮೆಯಾಗುತ್ತದೆ. ಉಷ್ಣ ದೇಹ ಪ್ರಕೃತಿಯವರು ಪೇರಳೆ ಹಣ್ಣು ಸೇವಿಸುವುದರಿಂದ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ.
Related Articles
Advertisement
ಪೇರಳೆ ಹಣ್ಣು ಮತ್ತು ಎಲೆಗಳಲ್ಲಿರುವ ಫೈಬರ್ ಅಂಶವು ದೇಹದಲ್ಲಿ ಡಯಾಬಿಟಿಸ್ ಪ್ರಮಾಣ ಹೆಚ್ಚುವುದನ್ನು ತಡೆಗಟ್ಟುತ್ತದೆ. ಅಥವಾ ಡಯಾಬಿಟಿಸ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಪೇರಳೆ ಎಲೆಯನ್ನು ಸೇವಿಸುವುದರಿಂದ ಅಥವಾ ಎಲೆಯ ಕಷಾಯ ಮಾಡಿ ಕುಡಿಯುವುದರಿಂದ ದೇಹದ ಭಾರವನ್ನು ಕಡಿಮೆ ಮಾಡಬಹುದು.
ಪೇರಳೆ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ಹೊಳಪು ಉಂಟಾಗುತ್ತದೆ. ಇದರಲ್ಲಿರುವ ವಿಟಮಿನ್‌ಗಳು ದೇಹದ ಕಾಂತಿ ವೃದ್ಧಿಗೆ ಸಹಕಾರಿ. ಈ ಹಣ್ಣಿ ನಲ್ಲಿ ವಿಟಮಿನ್ ಎ ಕೂಡಾ ಧಾರಾಳವಾಗಿ ಇದೆ. ಇದು ಕಣ್ಣಿನ ದೃಷ್ಟಿ ಹೆಚ್ಚಳಕ್ಕೆ ಸಹಕಾರಿ. ಕಣ್ಣಿನ ದೃಷ್ಟಿ ಕಡಿಮೆಯಾಗುವುದನ್ನು ತಡೆಯುವುದು ಮಾತ್ರವಲ್ಲ ಕಡಿಮೆಯಾದ ದೃಷ್ಟಿ ಸಾಮರ್ಥ್ಯವನ್ನು ಹೆಚ್ಚಳಕ್ಕೆ ಇದು ಸಹಕಾರಿ.