Advertisement
ಕಳೆದ ಹಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಹಲವಾರು ಹೋರಾಟಗಳನ್ನು ಮಾಡಿದ್ದು, ಜಿಲ್ಲೆಯ ಜನರು ಕೂಡಾ ಸೋಶಿಯಲ್ ಮೀಡಿಯಾ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೂ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯಾವುದೇ ತರಹದ ಪ್ರಕ್ರಿಯೆ ನಡೆಯದಿರುವುದು ಶೋಚನೀಯ ಸಂಗತಿ. ಈ ಎಲ್ಲಾ ಹೋರಾಟಗಳು ತಮ್ಮ ಗಮನಕ್ಕೆ ಬಂದಿರಲಿಲ್ಲವೇ? ಕಳೆದ ಕೆಲ ದಿನಗಳ ಹಿಂದೆ ಕುಮಟಾದಿಂದ ಭಟ್ಕಳದ ತಮ್ಮ ಕಚೇರಿಯವರೆಗೆ ಪಾದಯಾತ್ರೆಯಲ್ಲಿ ನೂರಾರು ಜನರು ಬಂದು ತಮ್ಮ ಕಛೇರಿಯ ಸಿಬ್ಬಂದಿಗೆ ಮನವಿ ನೀಡಿದ್ದೇವೆ ಇದು ತಮ್ಮ ಗಮನಕ್ಕೆ ಬಂದಿರಲೇಬೆಕು ಎಂದು ಭಾವಿಸಿದ್ದು ಆದರೆ ತಾವುಗಳು ಈ ಬಗ್ಗೆ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ನಿಮಗೆ ನಿರ್ಲಕ್ಷದ ವಿಷಯವೇ ಎಂದು ಪ್ರಶ್ನಿಸಿದ್ದಾರೆ.
Advertisement
Multi specialty Hospital; ಹಣ ಘೋಷಣೆಯಾಗದಿದ್ದಲ್ಲಿ ಸಚಿವ ವೈದ್ಯ ರಾಜೀನಾಮೆ ನೀಡಲಿ
08:41 PM Feb 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.