Advertisement
ಮುಳ್ಳಿಕಟ್ಟೆ ಜಂಕ್ಷನ್‌ನ ಯೂಟರ್ನ್ ನಲ್ಲಿ ಆಲೂರು ಕಡೆಗೆ ಹೋಗಲು ಯಾವುದೇ ಸೂಚನೆ ನೀಡದೆ ಚಲಿಸುತ್ತಿದ್ದ ಕಾರಿಗೆ ಬೈಂದೂರು ಕಡೆಯಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಇದೇ ವೇಳೆ ಹೆದ್ದಾರಿ ಬದಿಯ ಮಣ್ಣಿನ ರಸ್ತೆಯಲ್ಲಿ ನಿಲ್ಲಿಸಿದ್ದ ರಿಕ್ಷಾಕ್ಕೂ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಚಾಲಕ ರಾಘವೇಂದ್ರ, ಪ್ರಯಾಣಿಕರಾದ ಗಿರಿಜಾ, ಜ್ಯೋತಿ, ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯಲ್ಲಿರುವ ಜಂಕ್ಷನ್ ಅಪಾಯಕಾರಿಯಾಗಿದ್ದು, ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಅದಕ್ಕಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.